Slide
Slide
Slide
previous arrow
next arrow

ಎಲೆ ಚುಕ್ಕೆ ರೋಗ: ತೋಟಗಾರಿಕಾ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

300x250 AD

ಜೊಯಿಡಾ: ತಾಲೂಕಿನ ಫಣಸೋಲಿ, ಪೋಟೋಲಿ, ಚಾಪಖಂಡ ಭಾಗಗಳಲ್ಲಿ ಅಡಿಕೆ, ಕಾಳುಮೆಣಸು ಗಿಡಗಳಿಗೆ ಎಲೆ ಚುಕ್ಕೆ ರೋಗಗಳು ಬಂದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗ ಮಟ್ಟದ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸೋಮಶೇಖರ ಹುಲ್ಲೊಳಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಬಾರಿ ಅತಿಯಾದ ಮಳೆಯಿಂದಾಗಿ ಅಡಿಕೆ, ಕಾಳುಮೆಣಸುಗಳಿಗೆ ರೋಗ ಹೆಚ್ಚಿದೆ. ಔಷಧಗಳನ್ನು ಸಿಂಪಡಣೆ ಮಾಡಿದರೆ ರೋಗ ಕಡಿಮೆ ಆಗುತ್ತದೆ. ನಮ್ಮ ಇಲಾಖೆಯಿಂದ ಔಷಧಕ್ಕೆ ಸಹಾಯಧನ ನೀಡಲಾಗುತ್ತದೆ, ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ರೈತರು ಸಲಹೆ ಪಡೆಯಬೇಕು ಎಂದರು.

300x250 AD

ಈ ಸಂದರ್ಭದಲ್ಲಿ ಜೋಯಿಡಾ ತೋಟಗಾರಿಕಾ ಇಲಾಕೆಯ ಅಬ್ದುಲ್ ದಳವಾಯಿ ಹಾಗೂ ರೈತರು ಇದ್ದರು.

Share This
300x250 AD
300x250 AD
300x250 AD
Back to top