ಶಿರಸಿ:ಆರಾಧನಾ ಕಲೆ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕು ಎಂದು ಸಾಮಾಜಿಕ ಮುಖ್ಯಸ್ಥ, ಕೊಡ್ನಗದ್ದೆ ಗ್ರಾ.ಪಂ. ಸದಸ್ಯ ಪ್ರವೀಣ ಹೆಗಡೆ ಹೇಳಿದರು.
ಅವರು ಕೋಡ್ನಗದ್ದೆ ಪಂಚಾಯತ ಸಭಾಭವನದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಶಬರ ಸಂಸ್ಥೆ ಸೋಂದಾ ಪ್ರಸ್ತುತ ಪಡಿಸಿದ ಶನೇಶ್ವರಾಂಜನೇಯ ಯಕ್ಷಗಾನವನ್ನು ಚೆಂಡೆ ಬಾರಿಸುವುದು ಮೂಲಕ ಉದ್ಘಾಟಿಸಿ ಮಾತನಾಡಿ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಾಯತ ಅಧ್ಯಕ್ಷೆ ರಾಜೇಶ್ವರಿ ಭಟ್ಟ ನಗರದಿಂದ ದೂರವಿರುವ ಹಳ್ಳಿಗಳಲ್ಲೂ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ ಎಂದರು.
ಪಂಚಾಯತ್ ಸದಸ್ಯ ರಾಘವೇಂದ್ರ ಹೆಗಡೆ ಇತರರು ಇದ್ದರು. ನಾಗರಾಜ ಜೋಶಿ ಸೋಂದಾ ನಿರ್ವಹಿಸಿದರು. ನಂತರ ನಡೆದ ವಿನೂತನ ಆಖ್ಯಾನ ಶನೇಶ್ವರಾಂಜನೇಯ ಪ್ರದೇಶದಲ್ಲಿ ಗಜಾನನ ಭಟ್ ತುಳಗೇರಿ, ಅನಿರುದ್ಧ ಬೆಣ್ಣೆಮನೆ, ಉಮೇಶ್ ಹೆಗಡೆ ಹೆಗಡೆಕಟ್ಟಾ ಹಿಮ್ಮೇಳದಲ್ಲಿ ರಂಜಿಸಿದರು.ಮುಖ್ಯ ರಂಗಭೂಮಿಕೆಯಲ್ಲಿ ರಮಾನಂದ ಹೆಲ್ಲೆಕೊಪ್ಪ, ನಿರಂಜನ ಜಾಗ್ನಳ್ಳಿ, ಪ್ರವೀಣ ತಟ್ಟೀಸರ ಪಾತ್ರನಿರ್ವಹಿಸಿದರು.
Attachments