• Slide
  Slide
  Slide
  previous arrow
  next arrow
 • ನ್ಯಾಯಾಂಗ ವ್ಯವಸ್ಥೆಯ ಆದರ್ಶ ಮೌಲ್ಯ ಕಳೆಗುಂದಿದೆ: ಕಾಗೇರಿ

  300x250 AD

  ಕೋಲಾರ: ನ್ಯಾಯಾಂಗ ವ್ಯವಸ್ಥೆ ತನ್ನ ಆದರ್ಶ ಮೌಲ್ಯಗಳಲ್ಲಿ ಕಳೆಗುಂದಿದೆ. ನ್ಯಾಯಾಲಯಗಳಲ್ಲಿ ನ್ಯಾಯ ಸಿಗುತ್ತಿಲ್ಲ, ನಿರ್ಣಯ ಸಿಗುತ್ತಿದೆ ಎಂದು ಕೋಲಾರದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

  ಇಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯತೆ ಕುರಿತು ಸಂವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ನ್ಯಾಯಾಲಯಗಳಲ್ಲಿ ನ್ಯಾಯ ಸಿಗೋದಕ್ಕೆ ಕಷ್ಟವಾಗುತ್ತಿದೆ. ನ್ಯಾಯಾಲಯದಲ್ಲಿ ಜಡ್ಜ್ಮೆಂಟ್ ಸಿಗುತ್ತಿದೆ, ಜಸ್ಟೀಸ್ ಸಿಗುತ್ತಿಲ್ಲ. ಇನ್ನು ನ್ಯಾಯಾಂಗ ಇವತ್ತೇನು ಆದರ್ಶದ ತುತ್ತ ತುದಿಯಲ್ಲಿ ಇದೆಯಾ? ನ್ಯಾಯಾಲಯಗಳಲ್ಲಿ ಭ್ರಷ್ಟತೆ ಹಾಗೂ ವಿಳಂಬತೆ ಇಲ್ವ? ಎಂದು ಪ್ರಶ್ನಿಸಿದರು.

  ಶಾಸಕಾಂಗ ಕ್ಷೇತ್ರ, ರಾಜಕೀಯ ಕ್ಷೇತ್ರ ಸಂವಿಧಾನಬದ್ದವಾಗಿ ಸ್ಥಾಪನೆಯಾಗಿದೆ. ಬಹಳ ಜವಾಬ್ದಾರಿಯುತವಾಗಿದೆ. ರಾಜಕೀಯದವರು ಸರಿಯಾದರೆ ಎಲ್ಲರೂ ಸರಿಯಾಗುತ್ತಾರೆ ಎಂದು ಬೆರಳು ಮಾಡುತ್ತೀರಿ. ಅದಕ್ಕಾಗಿ ನಾವು ಸರಿ ಮಾಡಿಕೊಳ್ಳುತ್ತಿದ್ದೇವೆ, ಚರ್ಚೆ ಮಾಡುತ್ತಿದ್ದೇವೆ. ಆದರೆ ನಮ್ಮಲ್ಲಿ ಮಾತ್ರ ಸರಿ ಮಾಡಿಕೊಂಡರೆ ಸಾಕಾಗೋಲ್ಲ ಎಲ್ಲವೂ ಸರಿಯಾಗಬೇಕು ಎಂದರು.

  300x250 AD

  ಅಂಬೇಡ್ಕರ್ ಜೀವನಾನುಭವದಿಂದ ಸಂವಿಧಾನ ಶ್ರೇಷ್ಠ: ಸಂವಿಧಾನವನ್ನು ಅಂಬೇಡ್ಕರ್ ಅವರು ಬಿಟ್ಟು ಬೇರೆಯವರು ಬರೆದಿದ್ದರೆ ಅದು ಕೇವಲ ಅಕ್ಷರ ಜೋಡಣೆಯಾಗುತ್ತಿತ್ತು. ಅಂಬೇಡ್ಕರ್ ಅವರು ಶೋಷಣೆಯ ಜೀವಾನುಭವದ ಆಧಾರದ ಮೇಲೆ ಸಂವಿಧಾನ ರಚನೆ ಮಾಡಲು ಕಾರಣೀಕರ್ತರಾಗಿದ್ದಾರೆ. ಅದರಲ್ಲಿ ಜೀವನಾನುಭವ, ಸಮಾಜದ ಸ್ಥಿತಿಗತಿಗಳ ಅವಲೋಕನವಿದೆ, ಭವಿಷ್ಯದಲ್ಲಿ ಎಲ್ಲವನ್ನೂ ಸರಿಮಾಡುತ್ತೇನೆ ಎಂಬುವ ದೂರದೃಷ್ಟಿಕೋನವಿದೆ. ಆ ಕಾರಣದಿಂದ ಅದೊಂದು ಶ್ರೇಷ್ಠ ಸಂವಿಧಾನವಾಗಿ ಇವತ್ತಿಗೂ ಇದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top