• Slide
    Slide
    Slide
    previous arrow
    next arrow
  • ಶಶಿಭೂಷಣ ಹೆಗಡೆ ಯಾವ ಕಾರಣಕ್ಕೂ ಜೆಡಿಎಸ್ ಬಿಡಲ್ಲ: ಗಣಪಯ್ಯ ಗೌಡ

    300x250 AD

    ಶಿರಸಿ: ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆಯವರ ಕುಡಿಯಾಗಿರುವ ಶಶಿಭೂಷಣ ಹೆಗಡೆಯವರು ಜೆಡಿಎಸ್ ಅನ್ನು ಯಾವ ಕಾರಣಕ್ಕೂ ಬಿಡುವದಿಲ್ಲವೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಸ್ಪಷ್ಟಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಶಿಭೂಷಣ ಹೆಗಡೆಯವರು ಜೆಡಿಎಸ್ ತೊರೆಯುವುದು ಕೇವಲ ಉಹಾಪೋಹವಷ್ಟೇ. ಅವರು ಮುಂದಿನ ಚುನಾವಣೆಯಲ್ಲಿ ಸದಾ ನಮ್ಮೊಂದಿಗಿದ್ದು ಪಕ್ಷ ಬಲಪಡಿಸಲಿದ್ದಾರೆ. ಜಿಲ್ಲೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕಾಗಿದ್ದ ಕೆಲವು ಮುಖಂಡರು ಹಿಂದೆ ಸರಿದಿರುವುದರಿಂದ ನಮ್ಮ ಪಕ್ಷಕ್ಕೆ ಜಡತ್ವ ಬಂದಿರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸೇರಿ ಪಕ್ಷವನ್ನು ಮತ್ತೆ ಕಟ್ಟುತ್ತೇವೆ. ಕಾರಣ ಜಿಲ್ಲೆಯಲ್ಲಿ ಜೆಡಿಎಸ್ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಶಕ್ತಿಯಾಗಿ ಕುಮಾರಸ್ವಾಮಿ ಹಾಗೂ ದೇವೆಗೌಡರು ಇರಲಿದ್ದಾರೆಂದರು.

    ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಲಾಗುತ್ತಿದ್ದು, ಅದಕ್ಕೆ ಪೂರ್ವ ತಯಾರಿಯಾಗಿ ಅ,,30 ರಂದು ಕುಮಟಾದಲ್ಲಿ ಕುಮಾರಸ್ವಾಮಿ ಮತ್ತು ಸೂರಜ್ ನಾಯ್ಕ ಸೋನಿ ನೇತ್ರತ್ವದಲ್ಲಿ ಪಾದಯಾತ್ರೆ ನಡೆಸಲಾಗುವುದು.ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ,ದೇವೆಗೌಡರು ಸೇರಿದಂತೆ ಜೆಡಿಎಸ್‌ನ ದೊಡ್ಡ ನಾಯಕರ ದಂಡೇ ಜಿಲ್ಲೆಗೆ ಆಗಮಿಸಲಿದೆ ಎಂದರು.

    ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ನಾಯ್ಕ ಕಾಗಲ್ ಮಾತನಾಡಿ, ರಾಜ್ಯದಲ್ಲಿ ಮೊದಲ ಬಾರಿಗೆ ಗ್ರಾಮ ವಾಸ್ತವ್ಯ ಕಲ್ಪನೆ ನೀಡಿದ್ದೆ ಕುಮಾರಸ್ವಾಮಿಯವರು. ಅದರಂತೆ ಪ್ರಪ್ರಥಮವಾಗಿ ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಕುಮಾರಣ್ಣನವರಿಗೆ ಸಲ್ಲಬೇಕು. ಹೀಗೆ ಅವರು ರಾಜ್ಯದ ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರ ಮತ್ತೊಂದು ಮಹತ್ವಕಾಂಕ್ಷೆ ಯೋಜನೆ ಎಂದರೆ ಪಂಚರತ್ನ ಯೋಜನೆ. ಈ ಯೋಜನೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲಾಗುವುದು ಎಂದರು.

    300x250 AD

    ಈಗಾಗಲೇ ಜೆಡಿಎಸ್ ಸಂಭಾವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಅವರಿಗೆ ತರಬೇತಿ ನೀಡಲಾಗುತ್ತಿದೆ. ಇದರಿಂದ ಪಕ್ಷ ಸಂಘಟನೆಯೂ ಆಗಲಿದೆ. ಜಿಲ್ಲೆಯಲ್ಲಿ ಪಕ್ಷ ಅಸ್ತಿತ್ವ ಕಳೆದುಕೊಂಡಿಲ್ಲ. ಚುನಾವಣೆ ಹತ್ತಿರ ಬಂದಿರುವುದರಿAದ ಎಲ್ಲರೂ ಜಿಲ್ಲೆಗೆ ಬಗ್ಗೆ ಆಸ್ಪತ್ರೆ, ಅರಣ್ಯ ಅತಿಕ್ರಮಣ, ಶಿಕ್ಷಣ, ನಿರುದ್ಯೋಗ ಹೀಗೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅದು ಕೇವಲ ಚರ್ಚೆಯಾಗುತ್ತ ಜಲ್ವಂತವಾಗಿ ಉಳಿದು ಬಿಟ್ಟಿದೆ. ಇದಕ್ಕೆ ಶಾಶ್ವತ ಪರಿಹಾರ ಜೆಡಿಎಸ್ ಹುಡುಕಲಿದೆ ಎಂದರು.

    ಜೆಡಿಎಸ್ ಪ್ರಮುಖರಾದ ರಮೇಶ ನಾಯ್ಕ, ಪಿ.ಟಿ.ನಾಯ್ಕ,ಜಿ.ಕೆ.ಪಟಗಾರ, ಆರ್.ಜಿ.ನಾಯ್ಕ, ಮುಜಿಭ್, ಮೇರಿ ರೆಬಲ್, ಶೇಖರ್ ಪೂಜಾರಿ, ಅರುಣ ಗೌಡ, ಮುನಾಫ್ ಮಿರ್ಜಾನಕರ್, ತುಕರಾಮ್ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top