• Slide
    Slide
    Slide
    previous arrow
    next arrow
  • ದಿವೇಕರ ಮಹಾವಿದ್ಯಾಲಯದಲ್ಲಿ ವಿಚಕ್ಷಣ ಜಾಗರೂಕತೆ ಸಪ್ತಾಹ

    300x250 AD

    ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕೈಗಾ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಇಂಡಿಯಾ ಇವರ ವಿಚಕ್ಷಣ ವಿಭಾಗದ ವತಿಯಿಂದ 23ನೇ ವಾರ್ಷಿಕ ವಿಚಕ್ಷಣ ಜಾಗರೂಕತೆ ಸಪ್ತಾಹದ ಅಂಗವಾಗಿ ‘ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಕಾರ್ಯಕ್ರಮ ನಡೆಯಿತು.

    ಎನ್‌ಪಿಸಿಐಲ್ ವಿಜಿಲೆನ್ಸ್ನ ಜನರಲ್ ಮ್ಯಾನೇಜರ್ ಸಂಜಯ ಅರೋರಾ ಮುಂಬೈ ಕಾರ್ಯಕ್ರಮದಲ್ಲಿ ಮಾತನಾಡಿ, ಸರಕಾರಿ ಸೇವೆಗಳಿಗಾಗಿ ಹಣ ನೀಡುವಿಕೆ ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ. ಆದ್ದರಿಂದ ಹಾಗೆ ಮಾಡದಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ‘ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ವಿಷಯದ ಮೇಲೆ ವಿಜಿಲೆನ್ಸ್ ಆಫೀಸರ್‌ಗಳಾದ ವೆಂಕಟೇಶ ಹಾಗೂ ವಿಶ್ವೇಶ್ವರ ಹೆಗೆಡೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಕೇಶವ ಕೆ.ಜಿ., ಇಂದಿನ ಯುವಜನತೆ ಭ್ರಷ್ಟಾಚಾರ ಮಾಡದಂತೆ ತಡೆದಿದ್ದಲ್ಲಿ ಮುಂದಿನ ದಿನದಲ್ಲಿ ಭ್ರಷ್ಟಾಚಾರ ಮುಕ್ತ ಭಾರತವನ್ನಾಗಿ ನಿರ್ಮಾಣ ಮಾಡಬಹುದು ಎಂದು ನುಡಿದರು.

    300x250 AD

    ಉಪನ್ಯಾಸಕಿ ವಾಸವಿ ನಾಯ್ಕ ನಿರೂಪಿಸಿದರು. ಉಪನ್ಯಾಸಕಿ ತಸ್ನಿಮ್ ಶೇಖ್ ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top