Slide
Slide
Slide
previous arrow
next arrow

ಆರೋಗ್ಯ ಸಚಿವರಿಂದ ಹಿಲ್ಲೂರ್’ಗೆ ಸನ್ಮಾನ

300x250 AD

ಭಟ್ಕಳ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ಮಂಗಳವಾರದ ತಮ್ಮ ಜಿಲ್ಲಾ ಪ್ರವಾಸದಲ್ಲಿ ಭಟ್ಕಳಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಕಲೆ ಕುರಿತಾಗಿ ಗುಣಗಾನ ಮಾಡಿದರು.

ತದನಂತರದಲ್ಲಿ ಸಾಲಿಗ್ರಾಮ ಮೇಳದ ಪ್ರಧಾನ ಭಾಗವತರಾದ ಹಿಲ್ಲೂರು ರಾಮಕೃಷ್ಣ ಹೆಗಡೆ ಇವರನ್ನು ಶಾಲು ಹೊದೆಸಿ,ಸ್ಮರಣಿಕೆಯೊಂದಿಗೆ ಹೃದಯಸ್ಪರ್ಶಿ ಸನ್ಮಾನವನ್ನು ನೆರವೇರಿಸಿದರು.ನಂತರದಲ್ಲಿ ಸ್ವತಃ ತಾವೇ ಯಕ್ಷ ವೇಷ ಧರಿಸಿ ಸಂಭ್ರಮಿಸಿದರು.

300x250 AD

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೊಟಾ ಶ್ರೀನಿವಾಸ್ ಪೂಜಾರಿ,ಭಟ್ಕಳ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top