• Slide
    Slide
    Slide
    previous arrow
    next arrow
  • ಡಿಸೆಂಬರ್‌ನಲ್ಲಿ ಯಲ್ಲಾಪುರ ಕ್ರಿಕೆಟ್ ಪ್ರಿಮೀಯರ್ ಲೀಗ್

    300x250 AD

    ಯಲ್ಲಾಪುರ: ಲೆದರ್ ಬಾಲ್ ಕ್ರಿಕೆಟ್ ಪ್ರಿಮಿಯರ್ ಲೀಗ್ ಎರಡನೇ ಆವೃತ್ತಿಯ ಬರುವ ಡಿಸೆಂಬರ್ 18 ರಿಂದ ಆರಂಭವಾಗಲಿದೆ. ಇದರಲ್ಲಿ ಒಟ್ಟು ಯಲ್ಲಾಪುರದ 8 ಪ್ರಂಚಾಯಿಸಿಗಳು (ತಂಡಗಳು) ಭಾಗವಹಿಸುತ್ತಿದ್ದು, ಪ್ರಥಮ ಬಹುಮಾನ 1 ಲಕ್ಷ ರೂ. ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 75 ಸಾವಿರ ರೂ. ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ 15 ಸಾವಿರ ರೂ. ಮತ್ತು ಚತುರ್ಥ ಬಹುಮಾನ 10 ಸಾವಿರ ರೂ. ಜೊತೆಗೆ ಇನ್ನಿತರ ವೈಯಕ್ತಿಕ ಬಹುಮಾನಗಳನ್ನು ಈ ಪಂದ್ಯಾವಳಿಯು ಒಳಗೊಂಡಿರುತ್ತದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ನಾಯ್ಕ ಇಡಗುಂದಿ ತಿಳಿಸಿದ್ದಾರೆ.

    ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುವ ಐಪಿಎಲ್ ಮಾದರಿಯ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಟಗಾರರು ಅಕ್ಟೋಬರ್ 25ರ ಒಳಗಾಗಿ ನಿಗದಿತ ನಮೂನೆಯಲ್ಲಿ ಫಾರಂ ಅನ್ನು ತುಂಬಿ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಅಥವಾ ಸಚಿನ್ ನಾಗೇಂದ್ರ ಭಟ್ ಇವರಲ್ಲಿ ನೀಡಬೇಕಾಗಿದೆ. ನೋಂದಾಯಿಸಿದ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆಯು ನವಂಬರ್ 1ರಂದು ಬೆಳಿಗ್ಗೆ 10 ಘಂಟೆಯಿಂದ ಯಲ್ಲಾಪುರದ ನಿಸರ್ಗಮನೆಯಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9972520717, 9481680407, 9902610438, 9535020537, 9110856479, 6360763738 ಗೆ ಸಂಪರ್ಕಿಸಬಹುದು.

    ತಂಡ ಹಾಗೂ ಮಾಲೀಕರ ಹೆಸರು:

    300x250 AD

    ಆರ್.ಬಿ.ಟೈಗರ್ಸ್ (ರಘು ಜಡ್ಡಿಪಾಲ್), ಎಸ್.ಜೆ.ರಾಕರ್ಸ್ (ಸುಜೀತ್ ಕಿರವತ್ತಿ), ಸುಪರ್ ಕಿಲಾಡಿ (ಶಫಿ), ಎಮ್‌ಎನ್‌ಜೆ ಬುಲ್ಸ್ (ಎಂ.ಎನ್.ಭಟ್ಟ), ಅವೆಂಜರ್ಸ್ (ಅಸ್ಗರ್ ಅಲಿ), ರಾಯಲ್ ಸ್ಟೈಕರ್ಸ್ (ನಬೀಲ್ ಶೇಖ್), ಜಿ.ಕೆ.ವಾರಿಯರ್ಸ್ (ಗೌತಮ ಕಾಮತ್), ಗೊಲ್ಡನ್ ಈಗಲ್ (ಇರ್ಫಾನ್) ಮಾಲಿಕರಾಗಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top