ಅಂಕೋಲಾ: ನಮ್ಮ ಜಿಲ್ಲೆಯ ಹೆಮ್ಮೆಯ ಮತ್ತು ಜನಾನುರಾಗಿ, ದಕ್ಷ ಅಧಿಕಾರಿ ಡಾ.ಸುಮನ ಪೆನ್ನೇಕರ್ರವರ ವರ್ಗಾವಣೆ ತೆರೆಮರೆಯಲ್ಲಿ ನಡೆಯುತ್ತಿರುವುದಕ್ಕೆ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ ಉತ್ತರ ಕನ್ನಡ ಅಂಕೋಲಾ ಹಾಗೂ ನಾಗರಿಕ ವೇದಿಕೆ ಅಂಕೋಲಾ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಸಂಘದ ಜಿಲ್ಲಾಧ್ಯಕ್ಷ ಹರಿಹರ ವಿ.ಹರಿಕಾಂತ ಹಿಲ್ಲೂರು ಮಾತನಾಡಿದ್ದು, ಇಂತಹ ದಕ್ಷ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬೇಕು. ಓರ್ವ ಹೆಣ್ಣುಮಗಳಾಗಿ ಈ ರೀತಿ ಅಕ್ರಮಗಳಿಗೆ ಕಡಿವಾಣ ಹಾಕಿ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಇರುವಂತೆ ಮಾಡಿ, ಸಾಮಾಜಿಕ ನ್ಯಾಯ ನೀಡುವ ಇಂತಹ ನಿಷ್ಠ ಅಧಿಕಾರಿಯನ್ನು ವರ್ಗಾವಣೆ ಮಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಕೂಡದು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.