ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸುಮಾರು 12,000 ಜನಸಂಖ್ಯೆ ಇದ್ದು ಇಲ್ಲಿ ಕೆಲವು ವರ್ಷಗಳಿಂದ ಗ್ರಾಮ ಸಭೆ ಸರಿಯಾಗಿ ನಡೆಯುತ್ತಿಲ್ಲ. ಕಾರಣ ಅನೇಕ ಸಾರ್ವಜನಿಕ ಕುಂದು ಕೊರತೆಗಳು ಇದ್ದು, ಅದನ್ನು ಪರಿಶೀಲಿಸಿ, ಪರಿಹಾರ ನೀಡುವ ಸಲುವಾಗಿ ಜಿಲ್ಲಾಧಿಕಾರಿಗಳು ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಗ್ರಾಮ ವಾಸ್ತವ್ಯ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗೆ ಕೆಲ ಅಧಿಕಾರಿಗಳು ಭಾಗಿಯಾಗುತ್ತಿಲ್ಲ. ಇದರಿಂದ ಅನೇಕ ಸಾರ್ವಜನಿಕ ಕುಂದು ಕೊರತೆಗಳು ಬೇಡಿಕೆಯಾಗಿ ಉಳಿದಿವೆ.ಆದಕಾರಣ ಪಂಚಾಯತ ವ್ಯಾಪ್ತಿಯಲ್ಲಿ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಸುವಂತೆ 2019 ರಿಂದ ಸಾರ್ವಜನಿಕರು ಮನವಿ ಸಲ್ಲಿಸುತ್ತಾ ಬಂದಿದ್ದರೂ ಕೂಡಾ ಯಾವುದೇ ಸಭೆ ನಡೆಯದಿರುವುದು ನಿರ್ಲಕ್ಷ್ಯತನ ತೋರಿಸುವಂತಿದೆ.
ಕೆಲವು ಸಾರ್ವಜನಿಕ ಬೇಡಿಕೆಗಳು ಈ ಕೆಳಗಿನಂತಿವೆ.
- ಬದನಗೋಡ ಗಾಮ ಪಂಚಾಯತ ಪುನರ್ ವಿಂಗಡಣೆ ಮಾಡುವುದು.
- ಈ ಭಾಗದ ಎಲ್ಲಾ ಗ್ರಾಮಗಳಿಗೂ ಸಾರ್ವಜನಿಕ ಸ್ಮಶಾನ ಒದಗಿಸಿ ಕೊಡುವುದು.
- ಈಗಾಗಲೇ ಇರುವ ಗ್ರಾಮಗಳ ಸ್ಮಶಾನಗಳಿಗೆ ರಸ್ತೆ ಒದಗಿಸಿ ಕೊಡುವುದು.
- ದಾಸನಕೊಪ್ಪ ಪಾಥಮಿಕ ಆರೋಗ್ಯಕೆಂದ್ರಕ್ಕೆ ಕಂಪೌಂಡ್ ನಿರ್ಮಿಸುವುದು.
- ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಮೊಬೈಲ್ ಟವರ್ ಅತಿ ಅವಶ್ಯವಿದ್ದು ಇದರ ಬಗ್ಗೆ ಪರೀಶಿಲನೆ ಮಾಡುವುದು.
- ಈ ಭಾಗದ ಅನೇಕ ಗ್ರಾಮಗಳ ಸರಕಾರಿ ಕೆರೆಗಳನ್ನು ಸರ್ವೆ ಮಾಡಿ ಬೌಂಡರಿ ಮಾಡಿಸುವುದು. ದಾಸನಕೊಪ್ಪದಲ್ಲಿ 40 ಲಕ್ಷವೆಚ್ಚದಲ್ಲಿ ಮಾಡಲಾದ ಮೀನು ಮಾರುಕಟ್ಟೆ ಅನೇಕ ವರ್ಷವಾದರೂ ಇನ್ನೂ ಉದ್ಘಾಟನೆ ಆಗಿರುವುದಿಲ್ಲ. ಇದರ ಬಗ್ಗೆ ಪರೀಶಿಲನೆ ಮಾಡುವುದು.
- ಬದನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಂದು ರಾಷ್ಟ್ರೀಕೃತ ಬ್ಯಾಂಕಿನ ಅವಶ್ಯವಿದ್ದು ಇದರ ಬಗ್ಗೆ ಪರೀಶಿಲನೆ ಮಾಡುವುದು.
ಈ ಭಾಗದ ರೈತರಿಗೆ ಯೂರಿಯಾ ಗೊಬ್ಬರಕ್ಕೆ ಲಿಂಕ್ ನೀಡಿ ಗೊಬ್ಬರ ಒದಗಿಸುವಂತೆ ಪರೀಶಿಲನೆ ಮಾಡುವುದು ಹೀಗೆ ಹಲವಾರು ಬೇಡಿಕೆಗಳಿದ್ದು ಗ್ರಾಮ ವಾಸ್ತವ್ಯದ ಮೂಲಕ ಜನರ ಬೇಡಿಕೆಗಳನ್ನು ಸ್ವೀಕರಿಸಿ ಸೂಕ್ತ ಪರಿಹಾರ ನೀಡಲು ಗ್ರಾಮಸ್ಥರು,ಸಾರ್ವಜನಿಕರ ಪರವಾಗಿ ಯುವರಾಜ ಗೌಡ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.