Slide
Slide
Slide
previous arrow
next arrow

ಟೆಂಪೋ ಪಲ್ಟಿ; ಓರ್ವ ಸಾವು, 12ಕ್ಕೂ ಅಧಿಕ ಮಂದಿಗೆ ಗಾಯ

300x250 AD

ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಖರ್ವಾ ತಿರುವಿನಲ್ಲಿ ಟೆಂಪೋವೊಂದು ಪಲ್ಟಿಯಾಗಿದ್ದು, ಓರ್ವ ಮೃತಪಟ್ಟು 12ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗೇರುಸೊಪ್ಪಾ ಕಡೆಯಿಂದ ಹೊನ್ನಾವರಕ್ಕೆ ಪ್ರಯಾಣಿಕರನ್ನು   ಕರೆದುಕೊಂಡು ಹೋಗುವಾಗ ಖರ್ವಾ ಸಮೀಪ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಜಲವಳ್ಳಕರ್ಕಿಯ ಹನುಂಮತ ಪೂಜಾರಿ ಎನ್ನುವರರನ್ನ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸರಳಗಿಯ ಮಹೇಶ ನಾಯ್ಕ ಎನ್ನುವವರಿಗೆ ತಲೆ ಭಾಗಕ್ಕೆ ಗಂಭೀರ ಗಾಯ ಸಂಭವಿಸಿರುವುದರಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. 

300x250 AD

ಇತರ ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top