Slide
Slide
Slide
previous arrow
next arrow

ಅ.10ಕ್ಕೆ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧದ ಜಾಗೃತಿ ಕಾರ್ಯಕ್ರಮ

300x250 AD

ಶಿರಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಶಿರಸಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ,ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ, ಉಪೇಂದ್ರ ಪೈ ಸೇವಾ ಟ್ರಸ್ಟ್, ಶಿರಸಿ, ಜಿಲ್ಲಾ ಜನಜಾಗೃತಿ ವೇದಿಕೆ ಶಿರಸಿ, ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಪ್ರೇರಣೆಗಾಗಿ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧದ ಜಾಗೃತಿ ಕಾರ್ಯಕ್ರಮವನ್ನು ಅ.10 ಸೋಮವಾರ,ನಗರದ ಶ್ರೀ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ: 11-00 ಘಂಟೆಗೆ ಆಯೋಜಿಸಲಾಗಿದೆ.

ಸಭಾ ಕಾರ್ಯಕ್ರಮವನ್ನು  ಶಿರಸಿ ಉಪವಿಭಾಗದ ಸಹಾಯಕ ಆಯುಕ್ತ ದೇವರಾಜ್ ಆರ್. ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು  ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ‌ ಸುಭಾಸ್ ನಾಯ್ಕ ವಹಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಶಿರಸಿ ಉಪವಿಭಾಗದ ಉಪ ಅಧೀಕ್ಷಕ ರವಿ ಡಿ.ನಾಯ್ಕ್,ಎಸ್.ಕೆ.ಡಿ.ಆರ್.ಡಿ.ಪಿ ಬಿ.ಸಿ ಟ್ರಸ್ಟ್,ಜಿಲ್ಲಾ ನಿರ್ದೇಶಕ ಬಾಬು ನಾಯ್ಕ,ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷರವೀಂದ್ರ ಗಣಪತಿ ನಾಯ್ಕ, ಶಿರಸಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಉಪನ್ಯಾಸಕರಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ ಕರ್ನಾಟಕ ಪ್ರಾಂತ ಬೆಂಗಳೂರು ಅಧ್ಯಕ್ಷ ರಾಮು ಹರಿ ಕಿಣಿ ಆಗಮಿಸಲಿದ್ದು,ಜನಜಾಗೃತಿ ವೇದಿಕೆ, ಶಿರಸಿಯ ನಿಕಟ ಪೂರ್ವ ಅಧ್ಯಕ್ಷ ವಿವೇಕ್ ಎಲ್ ರಾಯ್ಕರ್,ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ,ಜಿಲ್ಲಾ ಜನಜಾಗೃತಿ ವೇದಿಕೆ, ಸದಸ್ಯೆ ಶ್ರೀಮತಿ ಸಂಧ್ಯಾ ಕುರ್ಡೇಕರ್, ಶ್ರೀಮತಿ ಗೌರಿ ನಾಯ್ಕ ಉಪಸ್ಥಿತಿ ನೀಡಲಿದ್ದಾರೆ.

300x250 AD

ಸಮಾಜದಲ್ಲಿರುವ ದುಶ್ಚಟವನ್ನು ದೂರ ಮಾಡುವಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ನಗರದ ವಿವಿಧ ಪ್ರದೇಶದಿಂದ ಬೆಳಿಗ್ಗೆ 9 ಘಂಟೆಗೆ ಜಾಗೃತಿ ಜಾಥಾ ಪ್ರಾರಂಭಗೊಂಡು ಗಾಂಧಿ ಪ್ರತಿಮೆ ಆ ಸಮಾಗಮಗೊಳ್ಳಲಿದ್ದು ನಂತರ ಶ್ರೀ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ಜಾಗೃತಿ ಸಭೆ ನಡೆಯಲಿದ್ದು ಸರ್ವರೂ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top