ಸಿದ್ದಾಪುರ: ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವರ ಸನ್ನಿಧಾನದಲ್ಲಿ ಅಕ್ಟೋಬರ್ 13 ರ ಸಂಕಷ್ಟಹರ ಚತುರ್ಥಿಯಂದು ಭಕ್ತಿ ಗಾನೋತ್ಸವ ಹಾಗೂ ಹತ್ತು ಸಹಸ್ರ ಮೋದಕ ಹವನ ನಡೆಯಲಿದೆ.
ಅಂದು ಬೆಳಿಗ್ಗೆ ಪ್ರಾರ್ಥನೆ, ಅಭಿಷೇಕ, ಗಣ ಹವನ, ಹತ್ತು ಸಹಸ್ರ ಮೋದಕ ಹವನ, ಮಹಾ ಮಂಗಳಾರತಿ, ಸಂಜೆ ರಥೋತ್ಸವ, ಪ್ರಸಾದ ಭೋಜನ ನಡೆಯಲಿದೆ.
ಅಂದು ಬೆಳಿಗ್ಗೆ 10.45ಕ್ಕೆಭಕ್ತಿ ಗಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲೇ ಮೊದಲ ಬಾರಿಗೆ ಧಾರವಾಡ ಯುವ ಗಾಯಕಿ, ಪಂಡಿತ್ ವೆಂಕಟೇಶಕುಮಾರ ಶಿಷ್ಯೆ ಕು. ಐಶ್ವರ್ಯ ದೇಸಾಯಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ತಬಲಾದಲ್ಲಿ ಕೇಶವ ಜೋಶಿ, ಹಾರ್ಮೋನಿಯಂದಲ್ಲಿ ಸತೀಶ ಭಟ್ಟ ಹೆಗ್ಗಾರ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹೈಕೋರ್ಟ ನ್ಯಾಯವಾದಿ ಉದಯ ದೇಸಾಯಿ, ಸೆಲ್ಕೋ ಇಂಡಿಯಾ ಸಿಇಓ ಮೋಹನ ಭಾಸ್ಕರ ಹೆಗಡೆ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.