ಸಿದ್ದಾಪುರ: ಆರೋಗ್ಯ ಅತ್ಯಂತ ಮಹತ್ವದ ಸಂಗತಿ. ಆರೋಗ್ಯವಂತ ಪ್ರಜೆಗಳಿಂದ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಬಹುದು. ಆದ್ದರಿಂದ ರೋಗ ಬರುವುದಕ್ಕಿಂತ ಮೊದಲು ಆರೋಗ್ಯದ ಕುರಿತಾದ ಕಾಳಜಿ ಅಗತ್ಯ. ವೈದ್ಯರು ದೇವರು ಸಮಾನ. ಅವರಲ್ಲಿ ನಮ್ಮ ಆರೋಗ್ಯದ ನಿಜವಾದ ಸಮಸ್ಯೆಯ ಸತ್ಯವನ್ನು ಹೇಳಬೇಕು. ಎಲ್ಲರೂ ತಮ್ಮ ಆರೋಗ್ಯದ ಕುರಿತು ಕಾಳಜಿ ತೆಗೆದುಕೊಳ್ಳುವದರಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದು. ಆರೋಗ್ಯವಂತ ಪ್ರಜೆ ದೇಶದ ಆಸ್ತಿ ಎಂದು ಸ್ಥಳೀಯ ಟಿ.ಎಮ್.ಎಸ್. ಅಧ್ಯಕ್ಷ ಹಾಗೂ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.
ಅವರು ತಾಲೂಕಿನ ಕಾನಸೂರು ಕಾಳಿಕಾ ಭವಾನಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಕೆ.ಎಸ್.ಹೆಗ್ಡೆ ಆಸ್ಪತ್ರೆ ಮಂಗಳೂರು ಅವರಿಂದ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹಾಗೂ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಿದ್ದಾಪುರ ಸಲಹಾ ಕೇಂದ್ರದ ಸಂಚಾಲಕ ಸಿ.ಎಸ್.ಗೌಡರ್ ಹೆಗ್ಗೋಡ್ಮನೆ ಮಾತನಾಡಿ, ಸಾರ್ವಜನಿಕರು ತಮ್ಮ ಸಲಹಾ ಕೇಂದ್ರದ ಸಹಕಾರ ಪಡೆದುಕೊಳ್ಳಬೇಕೆಂದರು. ವೈದ್ಯರುಗಳ ಪರವಾಗಿ ಡಾ.ಬಿನಿಯಮ್ ಕೆ. ಮಾತನಾಡಿದರು. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಪಿ.ಶಾಸ್ತ್ರಿ, ಕಾಳಿಕಾ ಭವಾನಿ ವಿದ್ಯಾಸಂಸ್ಥೆಯ ನಿರ್ದೇಶಕ ಎಂ.ಬಿ.ಹೆಗಡೆ ಕಲಕಟ್ಟೆ, ಕಾಳಿಕಾ ಭವಾನಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯಶಿಕ್ಷಕ ಜಿ.ಐ.ಹೆಗಡೆ ತಾರೇಹಳ್ಳಿ- ಕಾನಸೂರು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಜೋಶಿ ಈರಗೊಪ್ಪ ಅವರುಗಳು ಮಾತನಾಡಿದರು.
ಕೆ.ಎಸ್.ಹೆಗ್ಡೆ ಆಸ್ಪತ್ರೆ ವೈದ್ಯರುಗಳಾದ ಡಾ.ವಿಷ್ಣುಮೂರ್ತಿ, ಡಾ.ಧನಂಜಯಕುಮಾರ, ಡಾ.ವಿಘ್ನೇಶ ಮಹೇಂದ್ರ, ಡಾ.ಪ್ರಶಾಂತ ಬಿ.ನಾಯ್ಕ ಹಾಗೂ ಟಿ.ಎಂ.ಎಸ್. ನಿರ್ದೇಶಕರುಗಳಾದ ಜಿ.ಎಂ.ಭಟ್ ಕಾಜಿನಮನೆ, ಜಿ.ಆರ್.ಹೆಗಡೆ ಹಳದೋಟ, ಎಂ.ಎನ್.ಹೆಗಡೆ ತಲೆಕೆರೆ ಮತ್ತು ಹಿತ್ಲಕೊಪ್ಪ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಜೇತ ಗೌಡರ್ ಅವರುಗಳು ಉಪಸ್ಥಿತರಿದ್ದರು.
ಶಿಬಿರದ ಸಂಘಟನೆಯಲ್ಲಿ ಟಿ.ಎಂ.ಎಸ್. ಸಿದ್ದಾಪುರ, ಕೆ.ಎಸ್. ಹೆಗಡೆ ಆಸ್ಪತ್ರೆ, ತಾರೇಹಳ್ಳಿ ಕಾನಸೂರು ಸೇವಾ ಸಹಕಾರಿ ಸಂಘ, ಗ್ರೀನ್ ವ್ಯಾಲಿ ಅರ್ಗಾನ್ಯಿಕ್ ಸ್ಪೈಸಸ್ ಸಿದ್ದಾಪುರ, ತಾಲೂಕಾ ನಿವೃತ್ತ ನೌಕರರ ಸಂಘ ಸಿದ್ದಾಪುರ, ಸಿದ್ದಾಪುರ ಲಯನ್ಸ್ ಕ್ಲಬ್, ಕಾಳಿಕಾಭವಾನಿ ಪ್ರೌಢಶಾಲೆ ಕಾನಸೂರು, ಕೆ.ಎಸ್. ಹೆಗ್ಡೆ ಆಸ್ಪತ್ರೆ ಸಲಹಾ ಕೇಂದ್ರ ಸಿದ್ದಾಪುರ ಇವುಗಳು ತೊಡಗಿಕೊಂಡಿದ್ದವು. ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ಮಂಜುನಾಥ ಜೋಶಿ ವಂದಿಸಿದರು.