Slide
Slide
Slide
previous arrow
next arrow

ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶ: ಅರುಣ ಶೆಟ್ಟಿ

300x250 AD

ಅಂಕೋಲಾ: ಅಂಬೇಡ್ಕರ್ ಎಂಬ ವ್ಯಕ್ತಿಯೇ ಒಂದು ಸಂದೇಶವಾಗಿದ್ದು, ಇವರು ಶಿಕ್ಷಣ, ಸಮಾನತೆ, ಅಲ್ಲದೇ ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡಿ ಭವ್ಯ ಭಾರತದ ನಿರ್ಮಾಣದ ಮುನ್ನುಡಿ ಹಾಕಿದ ಮಹಾನ್ ಮಾನವತಾವಾದಿಯಾಗಿದ್ದಾರೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಹೇಳಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಟ್ಟಣದ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆದ ‘ಡಾ.ಅಂಬೇಡ್ಕರ್ ಓದು’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ, ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪುಸ್ತಕ ಬಹುಮಾನ ನೀಡಿ ಮಾತನಾಡುತ್ತಾ, ಪುಸ್ತಕಗಳ ಮೂಲಕ ಮಸ್ತಕಕ್ಕೆ ಅವರ ಸಾಧನೆ, ಜೀವನ ಚರಿತ್ರೆ ತುಂಬಿಕೊಳ್ಳಬೇಕು ಎಂದರು.
ಪತ್ರಕರ್ತ ಸುಭಾಸ ಕಾರೇಬೈಲ್ ಮಾತನಾಡಿ, ಸಮಾಜವು ಮುಂದುವರಿದ ಸಮಾಜದ ಶೋಷಣೆಯಲ್ಲಿ ನೊಂದ ಸಂದರ್ಬದಲ್ಲಿ ಸಂವಿಧಾನಿಕ ಸ್ಥಾನಮಾನ ನೀಡಿ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಕೊಡುಗೆ ನೀಡಿದ ದಾರ್ಶನಿಕ ಡಾ.ಅಂಬೇಡ್ಕರ್ ಎಂದರು. ಅವರ ಜ್ಞಾನವನ್ನು ಪುಸ್ತಕ ಓದುವ ವಯಸ್ಸಿನಲ್ಲಿ ತಮ್ಮ ಸಮಯವನ್ನು ಬಳಸಿಕೊಂಡು ಜ್ಞಾನದ ವೃದ್ಧಿ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದ ಪಿಟಿಟಿಐ ಉಪನ್ಯಾಸಕ ಚಂದ್ರಕಾಂತ ನಡಕಿನಮನಿ, ಅಂಬೇಡ್ಕರ ಅವರನ್ನು ಕೇವಲ ಸಂವಿಧಾನ ಶಿಲ್ಪಿಯಾಗಿ ಪರಿಗಣಿಸದೆ ಇಡಿ ಸಮಾಜದ ಪರಿವರ್ತನೆ ಮಾಡಿ ತುಳಿತಕ್ಕೆ ಒಳಗಾದ ಜನರ ಕಲ್ಯಾಣವೆ ಜೀವನವೆಂಬ0ತೆ ಭಾವಿಸಿ ನವಭಾರತ ಸೃಷ್ಠಿಯನ್ನೆ ಚಿತ್ತದಲ್ಲಿ ಇಟ್ಟುಕೊಂಡು ಕಾರ್ಮಿಕರಿಗಾಗಿ, ಸಮಾಜ ಕಲ್ಯಾಣದಲ್ಲಿ, ಆರ್ಥಿಕವಾಗಿ, ರಾಜಕೀಯವಾಗಿ ಕೊಡುಗೆ ನೀಡಿದ ಧೀಮಂತ ವ್ಯಕ್ತಿಯೇ ಅಂಬೇಡ್ಕರ್ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಡಾ.ವಿನಾಯಕ ಹೆಗಡೆ ಮಾತನಾಡಿದರು. ಗ್ಲೋರಿಯಾ ಸಂಗಡಿಗರು ಪ್ರಾರ್ಥಿಸಿದರು. ಮನೋಜ ಗೌಡ ಸ್ವಾಗತಿಸಿದರು. ಕನ್ನಡ ಸಂಸ್ಕöÈತಿ ಇಲಾಖೆಯ ಸಹಾಯಕ ನಿರ್ದೇಶಕ ನರೇಂದ್ರ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹನಾ ನಾಯ್ಕ ವಂದಿಸಿದರು, ವರ್ಷಾ ಆಚಾರಿ ನಿರೂಪಿಸಿದರು. ವೇದಿಕೆಯಲ್ಲಿ ಸಂಘಟಕರಾದ ಡಾ. ಪುಷ್ಪಾ ನಾಯ್ಕ ಉಪಸ್ಥಿತರಿದ್ದರು.


ಸ್ಪರ್ಧಾ ವಿಜೇತರು
ಕಾರ್ಯಕ್ರಮದ ನಿಮಿತ್ತ ಆಯೋಜಿಸಲಾಗಿದ್ದ ಭಾಷಣದಲ್ಲಿ ವರ್ಷಾ ಆಚಾರಿ ಪ್ರಥಮ, ರಕ್ಷಿತಾ ನಾಯ್ಕ ದ್ವಿತೀಯ, ಸೂರಜ ಐಮನ್ ತೃತೀಯ, ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾ ಆಚಾರಿ ಪ್ರಥಮ, ಪ್ರೀತಿ ಪ್ರಭು ದ್ವಿತೀಯ, ಮಹಿಮಾ ಗೌಡ ತೃತೀಯ, ಚಿತ್ರಕಲೆಯಲ್ಲಿ ಗೌರೀಶ ನಾಯ್ಕ ಪ್ರಥಮ, ವಿಶಾಲ ಶೆಡಗೇರಿ ದ್ವಿತೀಯ ರಕ್ಷಾ ಹೊಸಮನಿ ತೃತೀಯ ಬಹುಮಾನ ಪಡೆದರು.

300x250 AD
Share This
300x250 AD
300x250 AD
300x250 AD
Back to top