Slide
Slide
Slide
previous arrow
next arrow

ಜಾವೆಲಿನ್ ಎಸೆತದಲ್ಲಿ ಆದರ್ಶ ರಾಜ್ಯಕ್ಕೆ ದ್ವಿತೀಯ; ಕಾಂಗ್ರೆಸ್ಸಿಗರ ಸನ್ಮಾನ

300x250 AD

ಹೊನ್ನಾವರ: ದಸರಾ ಕ್ರೀಡಾಕೂಟದ ಜಾವೆಲಿನ್ ಎಸೆತದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಗಳಿಸಿದ ಪಟ್ಟಣದ ಕರ್ಕಿಯ ಆದರ್ಶ ನಾಯ್ಕ ಅವರನ್ನು ಕಾಂಗ್ರೆಸ್ ಮುಖಂಡರು ಸನ್ಮಾನಿಸಿದರು.
ಕರ್ಕಿಯ ನಾಗೇಶ ನಾಯ್ಕ ಮತ್ತು ಯಮುನಾ ದಂಪತಿ ಪುತ್ರನಾದ ಆದರ್ಶ, ಬಹುಮುಖ ಪ್ರತಿಭೆ ಆಗಿದ್ದಾರೆ. ಇವರು ಜಾವೆಲಿನ್ ಎಸೆತದಲ್ಲಿ ಹಲವು ಬಾರಿ ಪ್ರಶಸ್ತಿ ಪಡೆದಿದ್ದು, 9ನೇ ತರಗತಿಯಲ್ಲಿ ಧಾರವಾಡದಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ, ಎಸ್‌ಎಸ್‌ಎಲ್‌ಸಿಯಲ್ಲಿ ಬೆಳಗಾವಿಯಲ್ಲಿ ರಾಜ್ಯ ಮಟ್ಟಕ್ಕೆ ಮೂರನೇ ಸ್ಥಾನ ಗಳಿಸಿದ್ದು, ಪಿಯುಸಿಯಲ್ಲಿ ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದಾರೆ. ಹ್ಯಾಮರ್ ಮತ್ತು ಡಿಸ್ಕ್ ಎಸೆತಗಳಲ್ಲೂ ಗಣನೀಯ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಪ್ರತಿಭೆಯಾದ ಇವರ ಸಾಧನೆಯನ್ನು ಪ್ರಶಂಸಿಸಿ ಕಾಂಗ್ರೆಸ್ ಮುಖಂಡರುಗಳಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರದೀಪ ನಾಯಕ ದೇವರಬಾವಿ, ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಕರವೇ ಅಧ್ಯಕ್ಷ ಭಾಸ್ಕರ ಪಟಗಾರ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರತ್ನಾಕರ ನಾಯ್ಕ ಜೊತೆಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಲ್ಪನಾ ಪ್ಲೋರಾ, ಕೆಪಿಸಿಸಿ ಸದಸ್ಯ ವಿನೋದ ನಾಯ್ಕ ಕರ್ಕಿ, ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಹರಿಶ್ಚಂದ್ರ ನಾಯ್ಕ ಕರ್ಕಿ, ಗ್ರಾ.ಪಂ. ಸದಸ್ಯರುಗಳಾದ ನವೀನ ನಾಯ್ಕ ಹಳದಿಪುರ, ಗಿರೀಶ ಗೌಡ ಹಳದಿಪುರ, ಕರ್ಕಿ ಕಾಂಗ್ರೆಸ್ ಘಟಕಾಧ್ಯಕ್ಷ ಸತೀಶ ನಾಯ್ಕ, ಕಾಂಗ್ರೆಸ್ ಮುಖಂಡರುಗಳಾದ ಅಶೋಕ ಗೌಡ ಕುಮಟಾ, ಕೃಷ್ಣ ಗೌಡ ದಿವಗಿ, ಮೋಹನ ಪಟಗಾರ ಕುಮಟಾ, ಕಾರ್ಮಿಕ ಮುಖಂಡ ನಾಗೇಶ ನಾಯ್ಕ ಕರ್ಕಿ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top