ಶಿರಸಿ : ನೆರೆಯ ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಅವರು ವಿರೋಧ ವ್ಯಕ್ತಪಡಿಸಿದ್ದು, ನೂರಾರು ವರ್ಷಗಳಿಂದ ನಡೆಸಿಕೊಂಡು ಬಂದಂತಹ ಅಡಿಕೆ ಕೃಷಿಯಲ್ಲಿ ರೈತ ಚೇತರಿಸಿಕೊಳ್ಳುವಂತ ಸಂದರ್ಭದಲ್ಲಿ ಬೇರೆ ದೇಶ ಭೂತಾನ್ ದಿಂದ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ನೋಡಿದರೆ ಬಹಳ ತುಂಬಾ ಬೇಸರ ಮತ್ತು ಖೇದಕರ ವಿಷಯವಾಗಿದೆ. ಈಗಾಗಲೇ ಅಡಿಕೆ ಮರಗಳಿಗೆ, ಬೆಳೆಗಳಿಗೆ ತಗುಲಿರುವ ಚುಕ್ಕೆ ರೋಗ, ಅಡಿಕೆ ಕೊಳೆ, ಅಡಿಕೆ ಉದುರುವಿಕೆ ಸೇರಿ ಹಲವು ಸಮಸ್ಯೆಗಳನ್ನು ರೈತರು ಈಗಾಗಲೇ ಅನುಭವಿಸುತ್ತಿದ್ದಾರೆ. ಅಡಿಕೆ ರೋಗ ಅಡಿಕೆ ಕೃಷಿಯನ್ನು ಸಾಕಷ್ಟು ನಷ್ಟಕ್ಕೆ ಸಿಲುಕಿಸಿದೆ. ಸದ್ಯ ಕೇಂದ್ರದ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ ಇದರ ಮಧ್ಯೆ ಸರ್ಕಾರದ ಈ ಕ್ರಮ ನಿಜಕ್ಕೂ ಖಂಡನೀಯ. ಆಮದು ಮಾಡಿದ ಬೆಳೆಗಳ ಹಕ್ಕು ದೇಶೀಯ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಈ ಪರಿಸ್ಥಿತಿಯನ್ನು ವ್ಯಾಪಾರಿಗಳು ಬೆಲೆಯನ್ನು ಕಡಿಮೆ ಮಾಡಲು ಬಳಸಿಕೊಳ್ಳುತ್ತಾರೆ ಎಂದು ಹೇಳಿದರು.
ಸರ್ಕಾರಕ್ಕೆ, ಅಧಿಕಾರಿಗಳಿಗೆ ನಮ್ಮ ಬಗ್ಗೆ ನಿಜವಾದ ಕಾಳಜಿ ಇದ್ದರೆ ಅಡಿಕೆ ಬೆಳೆಗಾರರ ಈ ಪರಿಸ್ಥಿತಿಯನ್ನು ಸರ್ಕಾರದಲ್ಲಿ ಗಮನ ಇಟ್ಟುಕೊಂಡು ಇದಕ್ಕೆ ನ್ಯಾಯಯುತವಾದಂತಹ ಸಮ್ಮತಿ ನೀಡಬೇಕು ಮತ್ತು ರೈತರಿಗೆ ನಿಜವಾಗಿಯೂ ಬೇಕಾಗಿರುವುದು ಬೆಳೆಗೆ ತಕ್ಕ ನ್ಯಾಯಯುತ ಬೆಲೆ, ಅದನ್ನು ಕೊಡಿಸಲು ಪ್ರಯತ್ನಿಸಬೇಕು. ಈ ಮೇಲಿನ ವಿಷಯದ ಕುರಿತು ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಈ ಭಾಗದ ಅಡಿಕೆ ಬೆಳೆಗಾರರು, ರೈತರು ಸಂಘಟಿತರಾಗಿ ಸರ್ಕಾರಕ್ಕೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಹಾಗೂ ಅಡಿಕೆ ಬೆಳೆಗಾರರು, ರೈತರ ಜೊತೆಗೆ ಸಕಾರಾತ್ಮಕವಾಗಿ ತಮ್ಮ ಎಲ್ಲರ ಜೊತೆಯಲ್ಲಿ ನಾನು ಸ್ಪಂದಿಸುತ್ತೆನೆ ಎಂದು ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.