• Slide
  Slide
  Slide
  previous arrow
  next arrow
 • 68ನೇ ವನ್ಯಜೀವಿ ಸಪ್ತಾಹ; ವಾಲಿಬಾಲ್ ಪಂದ್ಯಾವಳಿ

  300x250 AD

  ಜೊಯಿಡಾ: ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಗುಂದ ವಲಯದಲ್ಲಿ ಅರಣ್ಯ ಇಲಾಖೆ ವತಿಯಿಂದ 68ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ವಾಲಿಬಾಲ್ ಪಂದ್ಯಾವಳಿಯನ್ನು ನಂದಿಗದ್ದಾ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮನಾ ಹರಿಜನ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುಂದ ವಲಯ ಅರಣ್ಯಾಧಿಕಾರಿ ರವಿಕಿರಣ್ ಸಂಪಗಾವಿ ಮಾತನಾಡಿ, 68ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಕ್ರೀಡಾ ಅಭಿಮಾನಿಗಳು ಆಟದಲ್ಲಿ ಭಾಗವಹಿಸಿ ಕ್ರೀಡೆಯನ್ನು ಬೆಳಸಬೇಕು ಎಂದರು.

  300x250 AD

  ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅರುಣ ದೇಸಾಯಿ, ಗುಂದ ಪ್ರೌಢಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಸದಾನಂದ ಉಪಾಧ್ಯ, ಅರಣ್ಯ ಇಲಾಖೆಯ ಡಿಆರ್‌ಎಫ್‌ಒಗಳಾದ ಶ್ರೀಮಂತ ಕಟ್ಟಿಮನಿ, ಶಂಕರಯ್ಯ ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಳವಿ ತಂಡ ಪ್ರಥಮ ಸ್ಥಾನ ಮತ್ತು ನಂದಿಗದ್ದೆ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

  Share This
  300x250 AD
  300x250 AD
  300x250 AD
  Leaderboard Ad
  Back to top