Slide
Slide
Slide
previous arrow
next arrow

ಯಶಸ್ವಿಯಾಗಿ ನಡೆದ ‘ಗೋವರ್ಧನಗಿರಿ ಪೂಜೆ’ ಯಕ್ಷಗಾನ

300x250 AD

ಶಿರಸಿ; ನವರಾತ್ರಿ ಪ್ರಯುಕ್ತ ನಗರದ ಮಾರಿಕಾಂಬಾ ದೇವಸ್ಥಾನದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಮುಟ್ಟುತ್ತಿವೆ. ಅಂತೆಯೇ ಶುಕ್ರವಾರ ಸಂಜೆ ಮಕ್ಕಳಿಂದ ನಡೆದ ಯಕ್ಷಗಾನವು ತುಂಬಿದ ಸಭಾಂಗಣದ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಶಿರಸಿಯ ಯಕ್ಷ ಕಲಾಸಂಗಮ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕೇಂದ್ರದ ಶಿಕ್ಷಕಿ ಸುಮಾ ಹೆಗಡೆ ಗಡಿಗೆಹೊಳೆ ಇವರ ಮಾರ್ಗದರ್ಶನದಲ್ಲಿ, ಮಕ್ಕಳಿಂದ ನಡೆದ ಸಮಯಮಿತಿ ಯಕ್ಷಗಾನ ‘ಗೋವರ್ಧನಗಿರಿ ಪೂಜೆ’ ಅದ್ಭುತವಾಗಿ ಪ್ರದರ್ಶನಗೊಂಡಿತು.
ಯಕ್ಷಗಾನಕ್ಕೆ ಹಿಮ್ಮೇಳದ ಭಾಗವತಿಕೆಯಲ್ಲಿ ಗಜಾನನ ಭಟ್ ತುಳಗೇರಿ, ಮದ್ದಳೆಯಲ್ಲಿ ಮಂಜುನಾಥ್ ಕಂಚೀಮನೆ ಹಾಗೂ ಚಂಡೆ ವಾದನದಲ್ಲಿ ಪ್ರಮೋದ್ ಕಬ್ಬಿನಗದ್ದೆ ಸಹಕರಿಸಿದರು.

ಮುಮ್ಮೇಳದಲ್ಲಿ ನಂದಗೋಪನಾಗಿ ಪ್ರಿಯಾಂಕಾ ಪಿ ಹೆಗಡೆ, ಕೃಷ್ಣನಾಗಿ  ತನ್ಮಯ್ ವಿ ಹೆಗಡೆ, ಬಲರಾಮನಾಗಿ  ಅವನಿ ಗಣೇಶ ಭಟ್, ಯಶೋದೆಯಾಗಿ ಲಾವಣ್ಯ ಶರ್ಮಾ, ಮಕರಂದನಾಗಿ ಸಂಯುಕ್ತ ಎನ್ ಹೆಗಡೆ, ಅಗ್ನಿಯಾಗಿ ಆಯುಷ್ ಯಾಜಿ, ದೇವೇಂದ್ರನಾಗಿ ಭಾವನಾ ಜಿ ಹೆಗಡೆ, ವರುಣನಾಗಿ ಶಮದ್ ಹೆಗಡೆ, ವಾಯುವಾಗಿ ಪ್ರಿಯಾ ಹೆಗಡೆ  ಸುಂದರವಾಗಿ ಪ್ರಸಂಗವನ್ನು ಪ್ರಸ್ತುತ ಪಡಿಸಿದರು.

300x250 AD

ಒಟ್ಟಾರೆ ಯಕ್ಷಗಾನವು ಯಕ್ಷಾಭಿಮಾನಿಗಳ ಮನಮುಟ್ಟಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಯಕ್ಷಗಾನದಲ್ಲಿನ ಮಕ್ಕಳ ಆಸಕ್ತಿ, ಉತ್ಸಾಹವು ಭವಿಷ್ಯದಲ್ಲಿ ಹೆಮ್ಮರವಾಗಲಿ ಎಂಬ ಆಶಯದಿಂದ ಮಕ್ಕಳನ್ನು ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top