Slide
Slide
Slide
previous arrow
next arrow

ಹಿಂದುಸ್ತಾನಿ ಸಂಗೀತ ವಾದ್ಯಗಳ ಕಾರ್ಯಾಗಾರ ಯಶಸ್ವಿ

300x250 AD

ಶಿರಸಿ: ಸಂಸ್ಕೃತಿ, ಕಲೆ ನಿರಂತರವಾದದ್ದು. ಕಲೆ ಚಲನ ಶೀಲವಾದದ್ದು. ಗುರುಕುಲ ಪರಂಪರೆ ಸಂಗೀತ ವೇದಗಳ ಅಧ್ಯಯನದಿಂದ ಇಂದು ಚಾಲನೆಯಲ್ಲಿದೆ. ಗುರು ಮುಂದೆ ಗುರಿ ಹಿಂದೆ ಎನ್ನುವ ಧ್ಯೇಯ ಗುರುಕುಲ ಪರಂಪರೆಯದ್ದು ಎಂದು ಸಂಗೀತಕಾರ ಎಂ ಪಿ ಹೆಗಡೆ ಪಡಿಗೇರೆ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಎರಡು ದಿನದಿಂದ ನಡೆಯುತ್ತಿದ್ದ ಹಿಂದುಸ್ತಾನಿ ಸಂಗೀತ ವಾದ್ಯಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರಾಗಗಳು ಸಂಗೀತದಲ್ಲಿ ಪ್ರತಿಕ್ಷಣಕ್ಕೂ ಹೊಸತನವನ್ನು ನೀಡುತ್ತವೆ. ಸಂಗೀತ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಎಂಇಎಸ್ ನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಲೋಕೇಶ ಹೆಗಡೆ ಮಾತನಾಡಿ ಹಿಂದೆಲ್ಲ ವಿದ್ಯಾರ್ಜನೆಗಾಗಿ ಗುರುಗಳನ್ನ ಅರಸಿಕೊಂಡು ವಿದ್ಯಾರ್ಥಿಗಳು ಹೋಗುತ್ತಿದ್ದರು. ಇಂದು ಕಾಲ ಬದಲಾಗಿದೆ ವಿದ್ಯಾರ್ಥಿಗಳಿದ್ದಲ್ಲಿ ಶಾಲೆಗಳು ಹೋಗುತ್ತಿವೆ ಇದಕ್ಕೆಲ್ಲ ತಂತ್ರಜ್ಞಾನದ ಬೆಳವಣಿಗೆ ಕಾರಣವಾಗಿದೆ. ಆದರೆ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುವಾಗ ಸ್ವ ನಿಯಂತ್ರಣವನ್ನ ಹಾಕಿಕೊಳ್ಳಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಗೋಪಾಲಕೃಷ್ಣ ಹೆಗಡೆ ಕಲಬಾಗ ಮಾತನಾಡಿ ಸಂಗೀತ ನಮಗೆ ಮನೋಲ್ಲಾಸವನ್ನು ನೀಡುತ್ತದೆ. ಸಂಗೀತ ಅಮೂರ್ತವಾದದ್ದು ಇದರಿಂದ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಟಿ ಎಸ್ ಹಳೆಮನೆ ಮಾತನಾಡಿ ಇಂದು ಸಂಸ್ಕಾರ ಮರೆಯಾಗುತ್ತಿದೆ. ವಿದ್ಯಾರ್ಥಿಗಳು ಸಂಸ್ಕಾರವನ್ನ ಬೆಳೆಸಿಕೊಳ್ಳಬೇಕಿದೆ. ಸಂಗೀತ ಕಲಿಕೆಯಿಂದ ಸಂಸ್ಕಾರ ಸಂಸ್ಕೃತಿ ಪಡೆದುಕೊಳ್ಳಬಹುದಾಗಿದೆ. ವಿದ್ಯೆಯಿದ್ದರಷ್ಟೇ ಸಾಲದು ಜೊತೆಗೆ ವಿನಯತೆಯೂ ನಮ್ಮದಾಗಿಸಿಕೊಳ್ಳಬೇಕು. ಇವೆರಡನ್ನು ಸಂಗೀತದಿಂದ ನಾವು ಪಡೆಯಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವ್ಯಾಸ ಮೂರ್ತಿ ಕಟ್ಟಿ ಉಪಸ್ಥಿತರಿದ್ದರು. ಶಿಬಿರಾರ್ಥಿ ಕುಮಾರಿ ಮೇಘನಾ ಅನಿಸಿಕೆ ವ್ಯಕ್ತಪಡಿಸಿದರು. ಸಂಗೀತ ವಿಭಾಗ ಮುಖ್ಯಸ್ಥ ಡಾ. ಕೆ ಜಿ ಭಟ್ ಸ್ವಾಗತಿಸಿದರು. ವಿದುಷಿ ಸೀಮಾ ಭಾಗವತ್ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top