Slide
Slide
Slide
previous arrow
next arrow

ಕಡತೋಕಾ ಜನತಾ ವಿದ್ಯಾಲಯದ ಕ್ರೀಡಾ ಸಾಧನೆ

300x250 AD

ಹೊನ್ನಾವರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉತ್ತರ ಕನ್ನಡ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹೊನ್ನಾವರ ಇವರ ಸಹಯೋಗದಲ್ಲಿ ಎಸ್.ಡಿ.ಎಮ್.ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2022- 23ನೇ ಸಾಲಿನ ತಾಲೂಕ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಜನತಾ ವಿದ್ಯಾಲಯ ಕಡತೋಕದ ವಿದ್ಯಾರ್ಥಿಗಳಾದ ಬಾಲಕಿಯರ ವಿಭಾಗದಲ್ಲಿ ಬಾಲ್ ಬ್ಯಾಂಡ್ಮಿಂಟನ್- ದ್ವಿತೀಯ (ಶ್ವೇತಾ ಶೇಟ, ಅನುರಾಧ ಹೆಗಡೆ, ನಾಗಶ್ರೀ ಪಟಗಾರ, ಧನ್ಯ ಮಡಿವಾಳ, ಐಶ್ವರ್ಯ ಮಡಿವಾಳ ಇವರ ತಂಡ) ಸ್ಥಾನ ಪಡೆದು ಶ್ವೇತಾ ಶೇಟ, ಅನುರಾಧ ಹೆಗಡೆ, ನಾಗಶ್ರೀ ಪಟಗಾರ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲಕರ ವಿಭಾಗದಲ್ಲಿ ಕುಮಾರ, ಕಾರ್ತಿಕ ಎಚ್.ಗೌಡ 100 ಮೀ. ಓಟ – ದ್ವಿತೀಯ & 200 ಮೀ. ಓಟ – ತೃತೀಯ, ಲೋಕೇಶ ಎಸ್. ಗೌಡ 110 ಮೀ. ಹರ್ಡಲ್ಸ್-ಪ್ರಥಮ, ಧಮೇಂದ್ರ ಎಸ್. ಗೌಡ ತ್ರಿವಿಧ ಜಿಗಿತ-ಪ್ರಥಮ, ಕುಮಾರಿ, ದಿವ್ಯ ಎಮ್. ಗೌಡ 100 ಮೀ. ಹರ್ಡಲ್ಸ್- ದ್ವಿತೀಯ, ಹಾಗೂ ಭಟ್ಕಳದಲ್ಲಿ ನಡೆದ 14 ವರ್ಷದೊಳಗಿನವರ ವಿಭಾಗದ ಕ್ರೀಡಾಕೂಟದಲ್ಲಿ ಕುಮಾರಿ, ಶೃತಿಕಾ ಡಿ. ಮುಕ್ರಿ 600 ಮೀ. ಓಟ- ಪ್ರಥಮ, ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಸಂಸ್ಥೆಯ, ಶಾಲೆಯ, ಊರಿನ, ತಾಲೂಕು ಹಾಗೂ ಜಿಲ್ಲೆಯ ಕೀರ್ತಿಯನ್ನ ಹೆಚ್ಚಿಸಿರುತ್ತಾರೆ.

300x250 AD

ಈ ವಿದ್ಯಾರ್ಥಿ/ನಿಯರನ್ನು ನಮ್ಮ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳು, ಟ್ರಸ್ಟಿಗಳು, ಶಾಲಾಭಿವೃಧ್ಧಿ ಸಮಿತಿಯವರು, ಪ್ರಾಚಾರ್ಯರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಮುಖ್ಯ ಶಿಕ್ಷಕರು, ಸಿಬ್ಬಂದಿ ವರ್ಗ, ಪೂರ್ವ ವಿದ್ಯಾರ್ಥಿಗಳು, ಹಾಗೂ ಊರ ನಾಗರಿಕರು ವಿಜೇತ ಕ್ರೀಡಾಪಟುಗಳನ್ನ ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣ ಆರ್.ಗೌಡ ಇವರು ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ತರಬೇತಿಯನ್ನು ನೀಡಿರುತ್ತಾರೆ.

Share This
300x250 AD
300x250 AD
300x250 AD
Back to top