• Slide
  Slide
  Slide
  previous arrow
  next arrow
 • ಸಂಭ್ರಮ, ಸಡಗರದ ನಡುವೆ ಸಂಪನ್ನಗೊಂಡ ರಾಮಲೀಲೋತ್ಸವ

  300x250 AD

  ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಕಾರ್ಖಾನೆಯ ಡಿಲಕ್ಸ್ ಮೈದಾನದಲ್ಲಿ ನಡೆದ ರಾಮಲೀಲೋತ್ಸವ ಕರ‍್ಯಕ್ರಮವು ಜಾತಿ, ಮತ, ಧರ್ಮ ಎಂಬ ಬೇಧವಿಲ್ಲದೆ ಎಲ್ಲರ ಭಾಗವಹಿಸುವಿಕೆಯ ಮೂಲಕ ಐಕ್ಯತೆ ಮೆರೆಯುವದರೊಂದಿಗೆ ಅಭೂತಪೂರ್ವವಾಗಿ ಹಾಗೂ ಆಕರ್ಷಣೀಯವಾಗಿ ನಡೆಯಿತು.

  ಸಂಜೆ ಸಮಯ 7 ಗಂಟೆಯಿಂದ ರಿಂದ 8.30 ಗಂಟೆಯವರೆಗೆ ನಡೆದ ಈ ಕಾರ್ಯಕ್ರಮದಲ್ಲಿ 50 ಅಡಿ ಎತ್ತರದ ರಾವಣನ ಮೂರ್ತಿ, 46 ಅಡಿ ಎತ್ತರದ ಕುಂಭಕರ್ಣನ ಮತ್ತು ಮೇಘನಾಥನ ಮೂರ್ತಿಯನ್ನು ಸಹಸ್ರ ಸಹಸ್ರ ಸಂಖ್ಯೆಯ ಜನರ ಸಮಾಗಮದೊಂದಿಗೆ ಸುಡಲಾಯಿತು. ಈ ಮೂರ್ತಿಗಳಿಗೆ ಅಗ್ನಿ ಸ್ಪರ್ಷ ಮಾಡುವ ಮೊದಲು ಸುಮಾರು ಒಂದು ಘಂಟೆಗಳ ಕಾಲ ನಿರಂತರವಾಗಿ ಬಿಜಾಪುರದ ಎಲ್.ಸಿ.ಶಹಾಪೂರಕರ ಸಿಂಗಡಿ ಹಾಗೂ ಅಂಕೋಲಾದ ಹನೀಪ್ ಅವರ ನೇತೃತ್ವದಲ್ಲಿ ಕಾರ್ಖಾನೆ ವತಿಯಿಂದ ಅತ್ಯಾಕರ್ಷಕ ಸಿಡಿಮದ್ದು ಪ್ರದರ್ಶನಗೊಂಡಿತು. ಬಾನಂಗಳದಲ್ಲಿ ರಂಗು ರಂಗಿನ ಚಿತ್ತಾರ, ಚಟಪಟ ಸದ್ದು, ವಿವಿಧ ಆಕರ್ಷಕ ಶಬ್ದಗಳು ಇವು ಸುಡುಮದ್ದು ಪ್ರದರ್ಶನದಲ್ಲಿ ಅಡಕವಾಗಿದ್ದವು.

  ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 40ರಿಂದ 50 ಸಾವಿರ ಜನ ಭಾಗವಹಿಸಿ ,ಸಾಕ್ಷಿಯಾದರು. ರಾವಣ, ಕುಂಭಕರ್ಣ ಮತ್ತು ಮೇಘನಾಥನ ಪ್ರತಿಮೆಯನ್ನು ಸುಡುವ ಕಾರ್ಯಕ್ರಮ ನೋಡಲು ನಗರದ ಜನ ಮಾತ್ರವಲ್ಲದೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಒಟ್ಟಿನಲ್ಲಿ ಬಹುಜನರ ಬೇಡಿಕೆಗೆ ಓಗೊಟ್ಟು 6 ವರ್ಷಗಳ ನಂತರ ಭರ್ಜರಿಯಾಗಿ ರಾಮಲೀಲೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ ಕಾಗದ ಕಾರ್ಖಾನೆಯ ಆಡಳಿತ ಮಂಡಳಿಗೆ ಮತ್ತು ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿದ್ದ ಕಾರ್ಖಾನೆಯ ಸ್ಪೋರ್ಟ್ಸ್ & ವೆಲ್ಪೇರ್ ವಿಭಾಗದ ಕರ‍್ಯದರ್ಶಿ ರಾಜೇಶ ತಿವಾರಿಯವರ ನೇತೃತ್ವದ ತಂಡದ ಬಗ್ಗೆ ಹಾಗೂ ಶಾಂತಿಯುವಾಗಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಪೊಲೀಸ್ ಇಲಾಖೆ ಹಾಗೂ ಕಾಗದ ಖಾರ್ಖಾನೆಯ ಭದ್ರತಾ ವಿಭಾಗದ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

  300x250 AD

  ವೈವಿಧ್ಯಮಯ ಕಾರ್ಯಕ್ರಮವನ್ನು ನೋಡಲು ಶಾಸಕರಾದ ಆರ್.ವಿ.ದೇಶಪಾಂಡೆ, ಅಪರ ಜಿಲ್ಲಾಧಿಕಾರಿ ರಾಜು ಮೋಗವೀರ್ ಆಗಮಿಸಿ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ದಂಪತಿ, ತಹಶೀಲ್ದಾರ್ ಶೈಲೇಶ ಪರಮಾನಂದ, ಡಿವೈಎಸ್ಪಿ ಗಣೇಶ್.ಕೆ.ಎಲ್, ಸಿಪಿಐ ಬಿ.ಎಸ್.ಲೋಕಾಪುರ, ಕಾರ್ಖಾನೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಗಣ್ಯರನೇಕರು ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Leaderboard Ad
  Back to top