ಹೊನ್ನಾವರ: ಮತ ಕೇಳಲು ನಿಮ್ಮ ಮನೆ ಬಾಗಿಲಿಗೆ ಬರುವಾಗ ನಿಮಗೆ ನೀಡಿದ ಆಶ್ವಾಸನೆ ಈಡೇರಿಸಿಯೇ ನಿಮ್ಮ ಮುಂದೆ ಬರಲಿದ್ದೇನೆ ಎಂದು ಜನತೆಗೆ ಶಾಸಕ ಸುನೀಲ ನಾಯ್ಕ ಭರವಸೆ ನೀಡಿದರು.
ಅವರು ಕೋಟೆಬೈಲ್ ಕ್ರೀಡಾಂಗಣದಲ್ಲಿ ಗ್ರಾಮದ 2.80 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು. ಚಿಕ್ಕನಕೋಡ ಗ್ರಾ.ಪಂ. ವ್ಯಾಪ್ತಿಯ 17 ರಸ್ತೆ ಕಾಮಗಾರಿಯು 2.80 ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಶಾಸಕರು ಶಂಕುಸ್ಥಾಪನೆ ನೇರವೇರಿಸಿದ ಬಳಿಕ ಮಾತನಾಡಿ ಅನೇಕ ದಶಕಗಳಿಂದ ಅಭಿವೃದ್ದಿ ಕಾಣದ ಗ್ರಾಮವನ್ನು ನನ್ನ ಅವಧಿಯಲ್ಲಿ 60 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಹೊಸ ರೂಪ ನೀಡಿ ಇತಿಹಾಸ ಮಾಡಿದ್ದೇನೆ. ಶಾಸಕನಾಗುವ ಪೂರ್ವದಲ್ಲಿ ಎರಡು ಸಂಕಲ್ಪ ಮಾಡಿ, ಅದರಂತೆ ಈ ಭಾಗಕ್ಕೆ ಸಂಪಕ ಕಲ್ಪಿಸುವ ಎರಡು ರಸ್ತೆ ಈಗಾಗಲೇ ಮುಗಿದಿದೆ. ಭಟ್ಕಳ ಕ್ಷೇತ್ರದ ಮಿನಿರಾಜಧಾನಿಯಂತೆ ಈ ಭಾಗವನ್ನು ಅಭಿವೃದ್ದಿಗೆ ಒತ್ತು ನೀಡಿದ್ದೆಡನೆ., ಮುಂದಿನ ದಿನದಲ್ಲೂ ಇದೇ ಗ್ರಾ.ಪಂ. ವ್ಯಾಪ್ತಿಯ ಹೊಸಗೋಡ ಭಾಗಕ್ಕೆ ಒಂದುವರೆ ಕೋಟಿ ವೆಚ್ಚದ ಸೇತುವೆ ಹಾಗೂ ರಸ್ತೆ ಕಾಮಗಾರಿಗೆ ಈ ತಿಂಗಳಿನಲ್ಲೆ ಚಾಲನೆ ಸಿಗಲಿದೆ. ಪಕ್ಷಭೇದ ಮಾಡದೇ ಅಭಿವೃದ್ದಿ ಮಾಡುತ್ತಿದ್ದು, ಕ್ಷೇತ್ರದ ಮತದಾರರು ಆರ್ಶಿವಾದದಿಂದ ಜನಪರ ಕಾಯ ಮಾಡುತ್ತಿದ್ದೇನೆ. “ಮುಂದಿನ ಅವಧಿಗೆ ಗೆಲ್ಲಲೇಬೇಕೆನ್ನುವ ಆಸಕ್ತಿ ಇಲ್ಲ” ಆದರೆ ನಿಮ್ಮ ಆರ್ಶಿವಾದ ಇದ್ದರೆ ಸಾಕು ಎಂದರು. “ಕೊಟ್ಟ ಮಾತು ಇಟ್ಟ ಗುರಿಗೆ ಎಂದು ತಪ್ಪುವುದಿಲ್ಲ” ಹಿಂದೆ ನಡೆದ ಚುನಾವಣೆಯಲ್ಲಿ ಯಾವುದೇ ಹಣ ನೀಡಿ ಮತ ಪಡೆದಿಲ್ಲ. ಜನರ ವಿಶ್ವಾಸ ಗಳಿಸಿ ಮತ ಪಡೆದಿದ್ದು, ಈಗಲೂ ಅದೇ ವಿಶ್ವಾಸ ಉಳಿಸಿಕೊಂಡಿದ್ದೇನೆ.
ಮತಗೊಸ್ಕರ ನಾನು ರಾಜಕಾರಣ ಮಾಡುವುದಿಲ್ಲ. ನಾನು ಹಿಂದುತ್ವಕ್ಕಾಗಿ ಹೋರಾಡುತ್ತೇನೆ. ಭಟ್ಕಳದಲ್ಲಿ ಹಿಂದುಗಳ ದೇವಸ್ಥಾನದ ಮುಂಭಾಗದಲ್ಲಿ ಮುಖ್ಯದ್ವಾರ ನಿರ್ಮಾಣಕ್ಕೆ ಮುಂದಾದರೆ ಅನ್ಯಕೋಮಿನವರು ವಿರೋಧಿಸುತ್ತಾರೆ. ಭಟ್ಕಳದ ಪ.ಪಂ. ನಾಮಫಲಕ ಉರ್ದು ಭಾಷೆಯಲ್ಲಿ ಹಾಕಲು ಹೋಗುತ್ತಾರೆ. ನಮ್ಮ ಸಂಸ್ಕ್ರತಿ ಹಾಗೂ ಧರ್ಮ ಉಳಿಸುವ ಕಾರ್ಯ ಮಾಡುತ್ತೇನೆ. ನಾನು ಶಾಸಕನಾಗಿ ಅಧಿಕಾರದಲ್ಲಿದ್ದಾಗ ಏನು ಮಾಡಲು ಸಾಧ್ಯವೋ ಅದೆಲ್ಲವನ್ನು ಮಾಡುತ್ತೇನೆ ಎಂದು ಭರವಸೆ ನೀಡಿದರು.