ಯಲ್ಲಾಪುರ: ಈದ್ ಮಿಲಾದ ಹಬ್ಬ ಇರುವ ಕಾರಣ ಪಟ್ಟಣದಲ್ಲಿ ಬರುವ ಅ.9 ರಂದು ಭಾನುವಾರ ನಡೆಯಬೇಕಿದ್ದ ವಾರದ ಸಂತೆಯನ್ನು ಅ.8 ಶನಿವಾರವೇ ನಡೆಸಲು ಪ.ಪಂ ನಿರ್ಧರಿಸಿದೆ.
ಈ ಕುರಿತು ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಅಧ್ಯಕ್ಷೆ ಸುನಂದಾ ದಾಸ್ ಪತ್ರಿಕಾ ಹೇಳಿಕೆ ನೀಡಿ, ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬೆಲ್ ರಸ್ತೆಯಲ್ಲಿ ಭಾನುವಾರ ಮೆರವಣಿಗೆ ನಡೆಯಲಿದೆ. ಅಲ್ಲಿಯೇ ನಡೆಯಬೇಕಿದ್ದ ವಾರದ ಸಂತೆಯನ್ನು ಒಂದು ದಿನ ಮುಂಚಿತವಾಗಿ ಶನಿವಾರ ನಡೆಸಲು ಗೌಸಿಯಾ ಮಸೀದಿಯ ಅಧ್ಯಕ್ಷರು ಮನವಿ ನೀಡಿದ್ದರು. ಅದರಂತೆ ಪಟ್ಟಣ ಪಂಚಾಯಿತಿ ಚರ್ಚಿಸಿ ಶನಿವಾರ ಸಂತೆ ನಡೆಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.