Slide
Slide
Slide
previous arrow
next arrow

ಧಾರವಾಡ ಸಹಕಾರ ಹಾಲು ಒಕ್ಕೂಟದಿಂದ ರೈತರಿಗೆ ನೀಡುವ ಪ್ರತೀ ಲೀ.ಹಾಲಿನ ದರದಲ್ಲಿ ರೂ.1 ಹೆಚ್ಚಳ

300x250 AD

ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ವತಿಯಿಂದ ಅಕ್ಟೋಬರ್ 1ನೇ ತಾರೀಖಿನಿಂದ ಪ್ರತೀ ಲೀಟರ್ ಹಾಲಿಗೆ ರೈತರಿಗೆ ನೀಡಲಾಗುವ ಹಾಲಿನ ದರದಲ್ಲಿ ರೂ.1 ಹೆಚ್ಚಳ ಮಾಡಲಾಗಿದ್ದು, ಪ್ರಸ್ತುತವಾಗಿ ಹಾಲು ಉತ್ಪಾದಕ ರೈತರಿಗೆ ಉತ್ತಮ ಗುಣಮಟ್ಟದ ಪ್ರತೀ ಲೀಟರ್ ಆಕಳು ಹಾಲಿಗೆ ರೂ.25, ಉತ್ತಮ ಗುಣಮಟ್ಟದ ಪ್ರತೀ ಲೀಟರ್ ಎಮ್ಮೆ ಹಾಲಿಗೆ ರೂ.39 ನಂತೆ ಇದ್ದು, ದರ ಹೆಚ್ಚಳದಿಂದ ರೈತರಿಗೆ ಪ್ರತೀ ಲೀಟರ್ ಆಕಳು ಹಾಲಿಗೆ ರೂ.26, ಹಾಗೂ ಪ್ರತೀ ಲೀಟರ್ ಎಮ್ಮೆ ಹಾಲಿಗೆ ರೂ.40 ರಂತೆ ದರ ಸಿಗಲಿದೆ ಎಂದು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದಿಂದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗುಡ್ನಾಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರುಗಳಾದ ಕೆರಿಯಪ್ಪ ಬ ಮಡಿವಾಳ, ಕಮಲಾ ಹನುಮಂತ ನಾಯ್ಕ, ಧೋರಣಗಿರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರಾದ ಗೋವಿಂದ ವೆಂಕಟರಮಣ ಹೆಗಡೆ, ಚಪ್ಪರಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರಾದ ರಘುಪತಿ ಭಾ ಹೆಗಡೆ ಇವರುಗಳು ಮರಣ ಹೊಂದಿದ ಕಾರಣ ಮರಣ ಹೊಂದಿದ ಕಲ್ಯಾಣ ಸಂಘದ ಸದಸ್ಯರುಗಳ ವಾರಸುದಾರರಿಗೆ ತಲಾ ರೂ. 10,000/-, ಮೊತ್ತದ ಚೆಕ್’ನ್ನು, ಹೆಗಡೆಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಯಾಣ ಸಂಘದ ಸದಸ್ಯರಾದ ಮಹಾಬಲೇಶ್ವರ ವಿ. ಭಟ್, ಗೋಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಾರಾಯಣ ಮಂಜ ನಾಯ್ಕ ಇವರುಗಳು ಶಸ್ತ್ರಚಿಕಿತ್ಸೆಗೆ ಒಳಗಾದ ಕಾರಣ ರೂ.5,000/- ಮೊತ್ತದ ಚೆಕ್, ಮರಗುಂಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ದೀರೇಂದ್ರ ಬೈರಾ ಗೌಡ ಇವರ ಆಕಳು ಮರಣ ಹೊಂದಿದ ಕಾರಣ ಜಾನುವಾರು ವಿಮಾ ಯೋಜನೆಯ ಅಡಿಯಲ್ಲಿ ರೂ.33,000/-ಮೊತ್ತದ ಚೆಕ್ ಹಾಗೂ ಶಿರಸಿ ತಾಲೂಕಿನಲ್ಲಿ ನೂತನಾಗಿ ಪ್ರಾರಂಭಗೊಂಡ ಕಾನಕೊಪ್ಪ, ಬಂಡಲ, ಕಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ತೂಕದ ಯಂತ್ರವನ್ನು ಖರೀದಿಸಲು ಒಕ್ಕೂಟದಿಂದ ಅನುದಾನದ ಮೊತ್ತ ರೂ.12,000 ಚೆಕ್ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು, ನಮ್ಮ ಒಕ್ಕೂಟದಿಂದ ಆಕಳು ಹಾಗೂ ಎಮ್ಮೆಯ ಹಾಲಿಗೆ ರೈತರಿಗೆ ನೀಡಲಾಗುವ ದರದಲ್ಲಿ ರೂ.1 ಹೆಚ್ಚಳ ಮಾಡಿದ್ದು ಜಿಲ್ಲೆಯ ಹಾಲು ಉತ್ಪಾದಕ ರೈತರಿಗೆ ಅತ್ಯಂತ ಸಹಕಾರಿಯಾಗಲಿದ್ದು, ರೈತರ ಹಿತದೃಷ್ಠಿಯಿಂದ ಇದು ಬಹಳ ಅನುಕೂಲಕರವಾಗಲಿದೆ ಎಂದರು. ಒಕ್ಕೂಟದ ವತಿಯಿಂದ ಈಗಾಗಲೇ ಶೇ. 50ರಷ್ಟು ಅನುದಾನದ ಅಡಿಯಲ್ಲಿ ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್ಗಳನ್ನು ಹಾಲು ಸಂಘಗಳಿಗೆ ನೇರವಾಗಿ ವಿತರಿಸಲಾಗಿದ್ದು, ಕಲ್ಯಾಣ ಸಂಘದ ವತಿಯಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿನ ಕಲ್ಯಾಣ ಸಂಘದ ಸದಸ್ಯತ್ವ ಹೊಂದಿದ ಹಾಲು ಉತ್ಪಾದಕರುಗಳಿಗೆ ವಿದ್ಯುತ್ ಚಾಲಿತ ಹುಲ್ಲು ಕತ್ತರಿಸುವ ಯಂತ್ರಗಳನ್ನು ಸಹ ನೀಡಲಾಗಿದೆ ಎಂದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಹೈನೋದ್ಯಮದಲ್ಲಿ ಉತ್ತಮ ಅವಕಾಶಗಳು ಬರಲಿದ್ದು, ಅದಕ್ಕಾಗಿ ಜಿಲ್ಲೆಯ ಜನರು ಹೈನೋದ್ಯಮದಿಂದ ವಿಮುಖರಾಗದಂತೆ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ವಿಸ್ತರಣಾಧಿಕಾರಿಗಳಾದ ಪ್ರಕಾಶ ಕೆ, ದಯಾನಂದ ಎ ಎನ್, ಮೌನೇಶ ಎಂ ಸೋನಾರ, ಎನ್.ಎನ್. ಹಿರೇಗೌಡರ್, ವಿನಾಯಕ ಬೇವಿನಕಟ್ಟಿ , ಶಿರಸಿ ಉಪವಿಭಾಗದ ಗುರುದರ್ಶನ್ ಭಟ್, ವಿಸ್ತರಣಾ ಸಮಾಲೋಚಕರುಗಳಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಚಂದನ ಕುಮಾರ ನಾಯ್ಕ, ಪ್ರವೀಣ ಕೆ ಬಳ್ಳಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಲ್ಯಾಣ ಸಂಘದ ಫಲಾನುಭವಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top