ಸಿದ್ದಾಪುರ : ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕು ಜೊತೆಗೆ ಅವು ಮಾದರಿ ಶಾಲೆಗಳಾಗಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು. ಅವರು ತಾವು ದತ್ತು ಸ್ವೀಕರಿಸಿದ ಗೋಳಿಮಕ್ಕಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಮ್ಮ ಟ್ರಸ್ಟ್ ವತಿಯಿಂದ 2 ಕೋಣೆಗಳಿಗೆ ಹಾಗೂ ಒಂದು ಒಳಗಿನ ವರಾಂಡಕ್ಕ ಸುಮಾರು ಒಂದು ಲಕ್ಷ ಮೊತ್ತದ ಟೈಲ್ಸ್ ಮತ್ತು ನೆಲಕ್ಕೆ ಹಾಸುವ ಮ್ಯಾಟ್ ನೀಡಿ ನಂತರ ಮಾತನಾಡಿ ಅವರು ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಶಿಕ್ಷಣ ಪಡೆಯುವುದು ಮಕ್ಕಳ ಕಡ್ಡಾಯ ಹಕ್ಕಾಗಿರುವ ಹಿನ್ನಲೆಯಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂದರು.
ಪ್ರತಿ ಮಗು ಶಾಲೆಗೆ ಸೇರಿ ಶಿಕ್ಷಣ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುವಂತಾಗಬೇಕು. ಪೋಷಕರು ಯಾವುದೇ ಕಾರಣಕ್ಕೂ ಹಿಂಜರಿಯದೇ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಕೋರಿದರು.ಊರಿನ ಹಿರಿಯರ ಸಮ್ಮುಖದಲ್ಲಿ ಎಸ್. ಡಿ. ಎಮ್. ಸಿ. ಅಧ್ಯಕ್ಷ ವಿನಾಯಕ ಗೌಡ, ಪಂಚಾಯತ್ ಸದಸ್ಯ ವೆಂಕ್ಕು ಗೌಡ ಅವರ ಉಪಸ್ಥಿತಿಯಲ್ಲಿ ಶಾರದಾ ಪೂಜೆಯ ಸಂಧರ್ಬದಲ್ಲಿ ಉಪೇಂದ್ರ ಪೈ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಷ ನಾಯ್ಕ ಕಾನಸೂರ, ಉಪನ್ಯಾಸಕ ರಾಮು ಕಿಣಿ ಹಾಗೂ ಎಲ್ಲ ಶಿಕ್ಷಕ ವೃಂದದವರು,ಊರಿನ ಹಿರಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.