ಭಟ್ಕಳ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಟ್ಕಳ ವತಿಯಿಂದ ವಿಜಯದಶಮಿ ಪ್ರಯುಕ್ತ ಗಣವೇಷಧಾರಿ ಸ್ವಯಂ ಸೇವಕರಿಂದ ನಡೆದ ಭವ್ಯ ಪಥಸಂಚಲನಕ್ಕೆ ಭಟ್ಕಳದ ನಗರವು ಸಾಕ್ಷಿಯಾಯಿತು.
ಭಟ್ಕಳದ ನ್ಯೂ ಇಂಗ್ಲಿಷ ಶಾಲಾ ಮೈದಾನದಲ್ಲಿ ಆರ್. ಎಸ್. ಎಸ್ ಗೀತೆ ಹೇಳುವ ಮೂಲಕ ಪ್ರಾರಂಭವಾದ ಪಥ ಸಂಚಲನ ಬಂದರು ರಸ್ತೆ, ಶಂಸುದ್ದೀನ್ ಸರ್ಕಲ್ ಮಾರ್ಗವಾಗಿ, ಹಳೆ ಬಸ್ ನಿಲ್ದಾಣ ಮೂಲಕ ಕಳಿ ಹನುಮಂತ ದೇವಸ್ಥಾನ ರಸ್ತೆ, ರಘುನಾಥ ರಸ್ತೆ, ವಿವಿ ರೋಡ್, ನೆಹರೂ ರಸ್ತೆ, ಹೂವಿನ ಪೇಟೆ, ಮಾರಿಕಾಂಬಾ ದೇವಸ್ಥಾನ ರಸ್ತೆ,ಮಿಸ್ಟಾ ಕ್ರಾಸ್, ವಿಟಿ ರೋಡ್, ಸೋನಾರಕೇರಿ ಮಾರ್ಗವಾಗಿ ಪುನಃ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುಭಾಷ್ ಶೆಟ್ಟಿ ಭಾಗವಹಿಸಿದರು. ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಕಿರಣ್ ಗುಡ್ಡದಕೇರಿ ಹುಬ್ಬಳ್ಳಿ ಭಾಗವಹಿಸಿದ್ದರು. ಈ ಪಥ ಸಂಚಲನದಲ್ಲಿ 800 ಕ್ಕೂ ಹೆಚ್ಚು ಗಣವೇಷಧಾರಿ ಸ್ವಯಂ ಸೇವಕರು, ಶಾಸಕ ಸುನೀಲ್ ನಾಯ್ಕ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ್ ನಾಯ್ಕ ಬಿಜೆಪಿ ಮುಖಂಡ ಕೃಷ್ಣ ನಾಯ್ಕ ಆಸರಕೇರಿ, ಈರ ನಾಯ್ಕ ಚೌತನಿ, ಮುಂತಾದವರು ಭಾಗವಹಿಸಿದ್ದರು. ಡಿ.ಎಸ್.ಪಿ ಕೆ ಯು ಬಿಳಿಯಪ್ಪ ನೇತೃತ್ವದಲ್ಲಿ ನೂರಾರು ಪೊಲೀಸರು ಬಿಗಿ ಭದ್ರತೆ ಒದಗಿಸಿದರು.