ಶಿರಸಿ : ಉಪನಿರ್ದೇಶಕರ ಕಾರ್ಯಾಲಯ ಶಿರಸಿ, ಶೈಕ್ಷಣಿಕ ಜಿಲ್ಲೆ ಶಿರಸಿ (ಉ.ಕ), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಯಲ್ಲಾಪುರ, ಇವರ ಸಹಯೋಗದಲ್ಲಿ ಯಲ್ಲಾಪುರದ ಕಾಳಮ್ಮನಗರ ತಾಲ್ಲೂಕಾ ಕ್ರೀಡಾಂಗಣದಲ್ಲಿ ಅ.ರಂದು ನಡೆದ 2022-23ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ 14 ವರ್ಷ ವಯೋಮಿತಿಯೊಳಗಿನ ವಿದ್ಯಾರ್ಥಿಗಳ ಬಾಲಕೀಯರ ವಿಭಾಗದ ಉದ್ದ ಜಿಗಿತ ಹಾಗೂ ಎತ್ತರ ಜಿಗಿತ ಸ್ಫರ್ಧೆಯಲ್ಲಿ 7ನೇ ತರಗತಿಯ ಕುಮಾರಿ ತನುಶ್ರೀ ಟಿ. ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಬಾಲಕಿಯರ ವಿಭಾಗದ ಥ್ರೋ ಬಾಲ್ ಸ್ಫರ್ಧೆಯಲ್ಲಿ ಕುಮಾರಿ ಸಮೀಕ್ಷಾ ರಾಯ್ಕರ್, ಶ್ರಾವ್ಯ ಎಸ್.ಕೆ., ವಸುನಿತಾ ಕಬ್ಬೇರ್, ಭೂಮಿಕಾ ಜಿ.ಟಿ., ಅದಿತಿ ನಾಯ್ಕ, ಅನನ್ಯಾ ದೇವಾಡಿಗ, ಕೀರ್ತನಾ ಗೌಡ, ವನ್ಯಾ ಹೆಗಡೆ, ಗೌತಮಿ ನಾಯ್ಕ, ಯೋಗಿತಾ ಮೋದಿ, ಪ್ರತೀಕ್ಷಾ ಶೆಟ್ಟಿ ಈ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಸಮೀಕ್ಷಾ ರಾಯ್ಕರ್, ಭೂಮಿಕಾ ಜಿ.ಟಿ, ಯೋಗಿತಾ ಮೋದಿ ವಿಭಾಗೀಯ ಮಟ್ಟದಲ್ಲಿ ಸ್ಪರ್ಧಿಸಲಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಕಿಯಾದ ಶ್ರೀಮತಿ ಚೇತನಾ ಪಾವಸ್ಕರ್ ಮಾರ್ಗದರ್ಶನ ನೀಡಿರುತ್ತಾರೆ. ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಮೆಡಲ್ ತಮ್ಮದಾಗಿಸಿಕೊಂಡು ಶಾಲೆಯ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಕ್ರೀಡಾರಂಗದಲ್ಲಿ ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂದವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.