ಶಿರಸಿ: ರಾಷ್ಟ್ರೀಯ ಪಾತ್ರಾಭಿನಯ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲೂ ಮಾರಿಕಾಂಬಾ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮೊದಲ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ನಗರದ ಭೂಮಾ ಪ್ರೌಢ ಶಾಲೆಯಲ್ಲಿ ನಡೆದ ಸ್ಪರ್ಧೆಯಲ್ಲಿ 9 ನೇ ವರ್ಗದ ವಿದ್ಯಾರ್ಥಿಗಳು ಮಾತ್ರ ಭಾಗವಹಿಸುವ ಹಿಂದಿ/ ಇಂಗ್ಲೀಷ್ ಭಾಷೆಯ ನಾಟಕ ಇದಾಗಿತ್ತು. ಮಾರಿಕಾಂಬಾದ 5 ಜನ ವಿದ್ಯಾರ್ಥಿಗಳ ತಂಡ ಪಾತ್ರಾಭಿನಯದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಸ್ಪಂದನಾ ಭಟ್ಟ, ಕಿಶನ್ ಕುಮಾರ ಹೆಗಡೆ, ಸಿಂಧು ಭಟ್ಟ, ಪೂರ್ವಿ ಶೇಟ್, ಗಾಯತ್ರಿ ಹೆಗಡೆ ತಂಡದಲ್ಲಿ ಭಾಗವಹಿಸಿದ್ದರು.
ನಿರ್ದೇಶನವನ್ನು ನಾರಾಯಣ ಭಾಗ್ವತ ನೀಡಿದ್ದರೆ, ಜಯಲಕ್ಷ್ಮೀ ಗುನಗಾ ನಿರ್ವಹಣೆ ಮಾಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಶಿಕ್ಷಕ ಆರ್.ವಿ.ನಾಯ್ಕ ಸಂತಸ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆ: ಮಾರಿಕಾಂಬಾ ಪ್ರೌಢಶಾಲೆ ಪ್ರಥಮ
