Slide
Slide
Slide
previous arrow
next arrow

ಲಯನ್ಸ ಶಾಲೆಯಲ್ಲಿ ಗಾಂಧಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ

300x250 AD

ಶಿರಸಿ: ಲಯನ್ಸ ಕ್ಲಬ್, ಲಿಯೋ ಕ್ಲಬ್ ಶಿರಸಿ ಹಾಗೂ ಶಿರಸಿ ಲಯನ್ಸ ಆಂಗ್ಲ ಮಾಧ್ಯಮ ಶಾಲೆಗಳ ಸಹಯೋಗದಲ್ಲಿ ಗಾಂಧಿಜಿ ಹಾಗೂ ಶಾಸ್ತ್ರೀಜಿ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಸ್ಕೌಟ್ ಹಾಗೂ ಗೈಡ್ ಹಾಗೂ ಇತರ ವಿದ್ಯಾರ್ಥಿಗಳು , ಶಿಕ್ಷಕರು ಶ್ರಮದಾನ ನಡೆಸಿಕೊಟ್ಟರು. ಶಾಲೆಯ ಸಂಗೀತ ಶಿಕ್ಷಕಿ ದೀಪಾ ಶಶಾಂಕ ಹೆಗಡೆ ಇವರಿಂದ ಹಾಗೂ ಮಕ್ಕಳಿಂದ ಗಾಂಧಿಜಿಯವರಿಗೆ ಪ್ರಿಯವಾದ ಭಜನಾ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ತಿಂಗಳ ಪತ್ರಿಕೆ ಕ್ಯಾಂಪಸ್ ನ್ನು ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ ತ್ರಿವಿಕ್ರಮ ಪಟವರ್ಧನ ಅನಾವರಣಗೊಳಿಸಿದರು. ಅವರು ತಮ್ಮ ಮಾತುಗಳಲ್ಲಿ ಮಹಾತ್ಮರ ಸಂದೇಶಗಳ ಪಾಲನೆ ಮಾಡಲು ತಿಳಿಸಿದರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಾಲೆಯ ಕ್ರೀಡಾ ಪ್ರತಿಭೆಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲಯನ್ಸ ಕ್ಲಬ್ ಕೋಶಾಧ್ಯಕ್ಷರಾದ ಲಯನ್ ರಾಜಲಕ್ಷ್ಮಿ ಹೆಗಡೆ, ಲಯನ್ ಸದಸ್ಯರಾದ ಲಯನ್ ಗುರುರಾಜ ಹೊನ್ನಾವರ, ಲಯನ್ ಬಾಬುಲಾಲ ಜೈನ್ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದರು.ಶಾಲಾ ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಗಾಂಧಿಜಿ ಹಾಗೂ ಶಾಸ್ತ್ರೀಜಿ ಜೀವನ ಸಾಧನೆ ಕುರಿತು ಮಾತನಾಡಿ ವಂದನಾರ್ಪಣೆಗೈದರು. ಸಹಶಿಕ್ಷಕಿಯವರಾದ ಶ್ರೀಮತಿ ಅನಿತಾ ಭಟ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕ- ಶಿಕ್ಷಕೇತರ ವೃಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

300x250 AD
Share This
300x250 AD
300x250 AD
300x250 AD
Back to top