• Slide
    Slide
    Slide
    previous arrow
    next arrow
  • ಜೆಡಿಎಸ್ ರಾಜ್ಯ ವಕ್ತಾರರಾಗಿ ರೋಷನ್ ಬಾವಾಜಿ ನೇಮಕ

    300x250 AD

    ದಾಂಡೇಲಿ: ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರನ್ನಾಗಿ ನಗರಸಭೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಕಾರ್ಯದರ್ಶಿಯಾಗಿದ್ದ ರೋಷನ್ ಬಾವಾಜಿಯವರನ್ನು ನೇಮಕ ಮಾಡಲಾಗಿದೆ.

    ಜೆ.ಡಿ.ಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ರಾಜ್ಯ ವಕ್ತಾರರನ್ನಾಗಿ ನೇಮಿಸಿ, ಅಧಿಕೃತ ಆದೇಶ ಪತ್ರವನ್ನು ನೀಡಿ, ಈ ಗುರುತರವಾದ ಜವಾಬ್ದಾರಿಯನ್ನು ಸಮರ್ಥವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ.

    300x250 AD

    ಕಳೆದ ಹಲವಾರು ವರ್ಷಗಳಿಂದ ಜೆ.ಡಿ.ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ರೋಷನ್ ಬಾವಾಜಿಯವರು ಸಾಮಾಜಿಕ ಹೋರಾಟಗಾರರಾಗಿಯೂ ತೊಡಗಿಸಿಕೊಂಡಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ರೋಷನ್ ಬಾವಾಜಿಯವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಜೆಡಿಎಸ್ ಪಕ್ಷದ ರಾಜ್ಯ ವಕ್ತಾರರಾಗಿ ನೇಮಕಗೊಂಡಿರುವ ರೋಷನ್ ಬಾವಾಜಿಯವರನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top