Slide
Slide
Slide
previous arrow
next arrow

ಬಾಕಿ ಹಣಕ್ಕಾಗಿ ಕೊಡಚಾದ್ರಿ ಕಛೇರಿಯಲ್ಲಿ ಗ್ರಾಹಕನ ಉಪವಾಸ ಧರಣಿ

300x250 AD

ಸಿದ್ದಾಪುರ: ಪಟ್ಟಣದ ಕೊಡಚಾದ್ರಿ ಚಿಟ್ಸ್ ಹಿಂತಿರುಗಿಸದೆ ಬಾಕಿ ಉಳಿಸಿಕೊಂಡಿರುವ ಹಣವನ್ನು ನೀಡುವಂತೆ ಶಾಖೆಯ ಕಚೇರಿಯಲ್ಲಿ ಗ್ರಾಹಕನೋರ್ವ ಉಪವಾಸ ಸತ್ಯಾಗ್ರಹ ನಡೆಸಿದ ಘಟನೆ ನಡೆದಿದೆ. ತನ್ನ ಆರೋಗ್ಯಕ್ಕೆ ಮತ್ತು ಜೀವಕ್ಕೆ ಏನೇ ತೊಂದರೆಯಾದರೂ ಸಂಸ್ಥೆ ಹಾಗೂ ಕಂಪನಿಯ ಕೆಲವು ವ್ಯಕ್ತಿಗಳು ಕಾರಣ ಎಂದು ಪತ್ರ ಬರೆದು ಧರಣಿಗೆ ಕುಳಿತಿದ್ದರು. ನಂತರ ಸಂಜೆಯ ವೇಳೆಗೆ ಹಣವನ್ನು ಸಂಸ್ಥೆ ನಿಗದಿತ ಕಾಲದಲ್ಲಿ ಮರಳಿಸುವ ಲೀಖಿತ ಭರವಸೆಯೊಂದಿಗೆ ಧರಣಿ ಅಂತ್ಯವಾಗಿದೆ.

ಪಟ್ಟಣದಲ್ಲಿ ಅಂಗಡಿಯನ್ನು ನಡೆಸುತ್ತಿರುವ ಹೊಸೂರು ಮಡಿವಾಳಕೇರಿಯ ಜಗದೀಶ ಎನ್ ಹೊಸೂರು ಕೋಡಚಾದ್ರಿ ಕಛೇರಿಯಲ್ಲಿ ಧರಣಿ ಕುಳಿತಿದ್ದರು. ತನಗೆ ಸಂಸ್ಥೆಯು ರೂ.1,57,410 ಮೊತ್ತದ ಹಣವನ್ನು ಹಿಂತಿರುಗಿಸದೆ ಉಳಿಸಿಕೊಂಡಿದೆ. ಈ ಕುರಿತು ಕಳೆದ ಜನವರಿ ತಿಂಗಳಿನಿಂದ ಕೇಳಿಕೊಂಡು ಬರುತ್ತಿದ್ದೇನೆ. ಪತ್ರ ಬರೆದಿದ್ದೇನೆ. ಆದರೂ ನಾನು ಚೀಟಿ ಕಟ್ಟಿದ ಹಣವನ್ನು ಮರಳಿಸದೆ ಉಳಿಸಿಕೊಂಡಿದೆ. ನನ್ನ ಈ ಹಣವನ್ನು ಇನ್ನೊಂದು ಬಾಕಿ ಇರುವ ಚೀಟಿಯ ಹಣವನ್ನು ಹಾಗೂ ಟ್ರಾನ್ಸ್ಪರ್ ಚಾರ್ಜ್ ತೆಗೆದುಕೊಂಡು ಉಳಿದಿರುವ ಬಾಕಿ ಮೊತ್ತವನ್ನು ಹಿಂತಿರುಗಿಸವರೆಗೆ ಆಮರಾಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇನೆ ಎಂದು ಹೇಳಿದ್ದರು.

ನಂತರ ಸ್ಥಳಕ್ಕೆ ಸ್ಥಳೀಯ ಪಿಎಸೈ ಎಂ.ಜಿ.ಕುಂಬಾರ್ ಭೇಟಿ ನೀಡಿ ಮಾತುಕತೆ ನಡೆಸಿದರು. ಕೊಡಚಾದ್ರಿ ಸಂಸ್ಥೆಯ ಅಧಿಕಾರಿಗಳು ಮುಂದಿನ ಕೆಲವು ದಿನಗಳಲ್ಲಿ ಹಣವನ್ನು ಮರಳಿಸುವ ಭರವಸೆಯನ್ನು ನೀಡಿದ ನಂತರದಲ್ಲಿ ಜನದೀಶ ಹೊಸೂರು ಧರಣಿಯನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ.

300x250 AD

ಸಂಘಟಿತರಾಗುತ್ತಿರುವ ಗ್ರಾಹಕರು: ಕೊಡಚಾದ್ರಿ ಚಿಟ್ಸ್ ಕಂಪನಿಯ ಗ್ರಾಹಕರು ತಾಲೂಕಿನಲ್ಲಿ ಸಂಗಟಿತರಾಗುತ್ತಿದ್ದಾರೆ.ಈಗಾಗಲೆ ಇವರುಗಳಿಂದ ತೊಂದರೆಗೆ ಒಳಗಾಗಿರುವ ಗ್ರಾಹಕರ ವಾಟ್ಸಪ್ ಗ್ರೂಪ್ ಕೂಡ ರಚನೆಯಾಗಿದೆ. ಗ್ರಾಹಕರ ಹೀತರಕ್ಷಣಾ ವೇದಿಕೆಯನ್ನು ಮಾಡಿಕೊಳ್ಳುವುದಕ್ಕೆ ಹಲವರು ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಗ್ರಾಹಕರಿಗೆ ಕಿರುಕೊಳ ನೀಡಿದರೆ, ತೊಂದರೆ ಆದರೆ ಅವರ ಹೀತವನ್ನು ರಕ್ಷಣೆ ಮಾಡುವುದಕ್ಕೆ ಸಂಘಟಿತರಾಗಬೇಕು ಎನ್ನುವ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಇದೆ ಮೊದಲಲ್ಲ: ಸ್ಥಳೀಯ ಕೊಡಚಾದ್ರಿ ಚಿಟ್ಸ್ನವರೊಂದಿಗೆ ಗ್ರಾಹಕರ ತಕರಾರು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹಲವು ಸಂದರ್ಭದಲ್ಲಿ ಅನೇಕರು ಸ್ಥಳೀಯ ಶಾಖೆಗೆ ಹೋಗಿ ಕಟ್ಟಿದ ಹಣಕ್ಕಾಗಿ ಕೇಳಿದವರಿದ್ದಾರೆ. ಮಾಡಿರುವ ಚೀಟಿ ಪೂರ್ಣವಾಗದವರಿಗೆ ಹಣ ಹಿಂತಿರುಗಿಸದ ಕುರಿತಾಗಿ ಅನೇಕರ ಆಕ್ಷೇಪಗಳಿವೆ. ಇವರ ನಿಬಂಧನೆಗಳ ಕುರಿತಾಗಿ ಸರಿಯಾಗಿ ಅರಿಯದ ಅನೇಕರು ಅರ್ಧಕ್ಕೆ ವ್ಯವಾಹಾರ ನಿಲ್ಲಿಸಿ ಹಣಕ್ಕಾಗಿ ಕಚೇರಿಯನ್ನು ಅಲೆಯುತ್ತಿದ್ದಾರೆ ಎನ್ನುವಮಾತುಗಳು ಕೇಳಿಬರುತ್ತಿದೆ.

Share This
300x250 AD
300x250 AD
300x250 AD
Back to top