• Slide
    Slide
    Slide
    previous arrow
    next arrow
  • ಹಿಂದುಗಳ ಹತ್ಯೆ ಹೆಚ್ಚಾಗಲು ಸಿದ್ದರಾಮಯ್ಯನವರೇ ಕಾರಣ: ಬಿಜೆಪಿ ಜಿಲ್ಲಾಧ್ಯಕ್ಷ

    300x250 AD

    ಕಾರವಾರ: ಕರ್ನಾಟಕದಲ್ಲಿ ಹಿಂದುಗಳ ಹತ್ಯೆ ಹೆಚ್ಚಾಗಲು ಸಿದ್ದರಾಮಯ್ಯನವರೇ ಕಾರಣ. ದುಷ್ಕೃತ್ಯ ನಡೆಸುತ್ತಿದ್ದ ಮುಸ್ಲಿಂ ಸಂಘಟನೆಗಳನ್ನು ಮಟ್ಟ ಹಾಕುವಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರಕಾರ ಸಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 174 ಪ್ರಕರಣದಲ್ಲಿದ್ದ 1600 ಆರೋಪಿಗಳನ್ನು ಬಿಡುಗಡೆ ಮಾಡಿದ್ದರು. ಇದರಿಂದ ಇನ್ನಷ್ಟು ಹಿಂದೂಗಳ ಹತ್ಯೆಯಾಗಿದೆ ಎಂದರು. ಅಮೇರಿಕಾದ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಿದಾಗ ಶಾಂತಿ ಕದಡುವಿಕೆ ಹಾಗೂ ದೇಶಾದ್ಯಂತ ರೈತರ ಹೋರಾಟ ನಡೆಯುವ ಹಿಂದೆಯೂ ಪಿಎಫ್‌ಐ ಕೈವಾಡ ಇತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರದ ರಕ್ಷಣಾ ಸಲಹೆಗಾರ ಅಜಿತ್ ಧೋವಲ್ ಅವರು ಇಂಥ ದೇಶ ವಿರೋಧಿ ಸಂಘಟನೆಗಳನ್ನು 5 ವರ್ಷ ನಿಷೇಧಿಸಿರುವುದು ಉತ್ತಮ ಬೆಳವಣಿಗೆ. ವಿದೇಶದಿಂದ ಹವಾಲ ಮೂಲಕ ಹಣ ತರಿಸಿ ದೇಶ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಇಂತಹ ಸಂಘಟನೆಗಳ ನಿಷೇಧವನ್ನು ಮುಸ್ಲಿಂ ಮುಖಂಡರೇ ಸ್ವಾಗತಿಸಿದ್ದಾರೆ ಎಂದರು.

    ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಮಾತನಾಡಿ, ಜಿಲ್ಲೆಯಲ್ಲಿ ನಡೆದ ಪರೇಶ್ ಮೇಸ್ತ ಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು 3ನೇ ಆರೋಪಿಯನ್ನಾಗಿಸಬೇಕು. ಹತ್ಯೆಯಾದ ದಿನ ಅವರು ಜಿಲ್ಲೆಯಲ್ಲಿಯೇ ಇದ್ದರು. ಅವರು ತೆರಳಿದ ಬಳಿಕ ಮೃತದೇಹ ಸಿಕ್ಕಿದೆ. ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲೆಯಲ್ಲಿ ಸಾಕಷ್ಟು ಸರಕಾರಿ ವೈದ್ಯರಿದ್ದರೂ ಮಣಿಪಾಲಕ್ಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಸಾಕ್ಷಿ ನಾಶವಾದ ಬಳಿಕವೇ ಅವರು ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರು. ಹೀಗಾಗಿ ಸಾಕ್ಷಿ ನಾಶಕ್ಕಾಗಿ ಅವರನ್ನು ಮೂರನೇ ಆರೋಪಿಯನ್ನಾಗಿಸಬೇಕು ಎಂದರು.

    300x250 AD

    ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಉಷಾ ಹೆಗಡೆ, ಮಾಧ್ಯಮ ಪ್ರಕೋಷ್ಟದ ವ್ಯವಸ್ಥಾಪಕ ನವೀನ ಅಯೋಧ್ಯ ಹಾಗೂ ವಿಭಾಗೀಯ ಸಹಪ್ರಭಾರಿ ಎನ್.ಎಸ್.ಹೆಗಡೆ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top