Slide
Slide
Slide
previous arrow
next arrow

ಅಂಡಗಿ ಶ್ರೀ ಗುರುಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಸಂಪನ್ನ

300x250 AD

ಶಿರಸಿ: ನವರಾತ್ರಿಯ ಅಂಗವಾಗಿ ತಾಲೂಕಿನ ಅಂಡಗಿ ಶ್ರೀ ಗುರುಮಠದಲ್ಲಿ ಶುಕ್ರವಾರ ಲಲಿತ ಸಹಸ್ರ ನಾಮಾವಳಿ ಸೇರಿದಂತೆ ವಿವರ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿ ಯಿಂದ‌ ನೆರವೆರಿದವು.

ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಶ್ರೀ ಅವದೂತ ಸದ್ಗೂರು ಕಲ್ಲೇಶ್ವರ ಮಹಾಸ್ವಾಮಿಯವರ ಸನ್ನಿಧಾನದಲ್ಲಿ ಶುಕ್ರವಾರ ಮುಂಜಾನೆ ಗುರುಗಳ ಪಾದಪೂಜೆ , ಕುಂಭ ಪ್ರದಕ್ಷಿಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ವಿಶ್ವನಾಥ ಪುರೋಹಿತರು ಸೊರಬ ಇವರ ಪೌರೋಹಿತ್ಯ ದಲ್ಲಿ ನಡೆದ ಲಲಿತಾ ಸಹಸ್ರ ನಾಮಾವಳಿ ಕಾರ್ಯಕ್ರಮದಲ್ಲಿ ನೂರಾರು ಸುಮಂಗಲೆಯರು ಪಾಲ್ಗೊಂಡು ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೆರಿಸಿಕೊಟ್ಟರು. ಜೊತೆಗೆ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು..

300x250 AD

ತದನಂತರ, ಬಂದಂತಹ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಿಸಲಾಯಿತು .ಭಕ್ತರು ಪ್ರಸಾದ ಸ್ವೀಕರಿಸಿ ಗುರುಗಳ ಕೃಪೆಗೆ ಪಾತ್ರರಾದರು..

Share This
300x250 AD
300x250 AD
300x250 AD
Back to top