ಶಿರಸಿ: ಎಂಇಎಸ್ ನ ಎಂಎಂ ಕಾಲೇಜಿನ ಎನ್ ಸಿ ಸಿ,ಎನ್ ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಘಟಕ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಟಿ ಎಸ್ ಎಸ್ ಆಸ್ಪತ್ರೆಯ ರಕ್ತ ನಿಧಿ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ರಕ್ತ ಗುಂಪು ವರ್ಗೀಕರಣ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿಎಸ್ ಹಳೆಮನೆ, ರಕ್ತದಾನ ಮಹಾದಾನ. ವಿದ್ಯಾದಾನ ಅನ್ನದಾನಕ್ಕಿಂತ ಶ್ರೇಷ್ಠವಾದದ್ದು ರಕ್ತದಾನ ಮಾಡುವುದರಿಂದ ಇನ್ನೊಂದು ಜೀವವನ್ನ ಉಳಿಸುವ ಹೆಮ್ಮೆ ನಮ್ಮದಾಗುತ್ತದೆ ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಯನ್ನ ಅರಿತು ತಮಗೂ ಜವಾಬ್ದಾರಿ ಇದೆ ಎಂಬುದನ್ನು ತೋರಿಸಬೇಕು ರಕ್ತದಾನವನ್ನು ಮಾಡಿ ಇನ್ನೊಂದು ಜೀವಕ್ಕೆ ನೆರವಾಗಬೇಕು ಎಂದರು.
ಎಂ ಎಂ ಕಾಲೇಜು ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ರಕ್ತ ಗುಂಪು ವರ್ಗೀಕರಣವನ್ನು ಮಾಡಿಸಿಕೊಂಡರು. ಹಾಗೆಯೇ 25ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನವನ್ನ ಮಾಡಿದರು. ಈ ಸಂದರ್ಭದಲ್ಲಿ ಎನ್ ಸಿ ಸಿ ಅಧಿಕಾರಿ ಪ್ರೊ ಅಶ್ವಥ್, ಎನ್ಎಸ್ಎಸ್ ಅಧಿಕಾರಿ ಡಾ. ಆರ್ ಆರ್ ಹೆಗಡೆ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿ ಪ್ರೋ ಆರ್ ವೈ ಕೋಳೇಕರ್, ರೆಡ್ ಕ್ರಾಸ್ ಅಧಿಕಾರಿ ಪ್ರೊ ರಾಘವೇಂದ್ರ ಹೆಗಡೆ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.