• Slide
    Slide
    Slide
    previous arrow
    next arrow
  • ಲಯನ್ಸ್’ನಲ್ಲಿ ‘ಪೀಸ್ ಪೋಸ್ಟರ್ ಕಾಂಟೆಸ್ಟ್’

    300x250 AD

    ಶಿರಸಿ : ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಪೀಸ್ ಪೋಸ್ಟರ್ ಕಾಂಟೆಸ್ಟ್ ಶಿರಸಿ ಲಯನ್ಸ್ ಕ್ಲಬ್ ಅಡಿಯಲ್ಲಿ ಸೆ. 29 ಗುರುವಾರದಂದು ಲಯನ್ಸ್ ಸಭಾಭವನದಲ್ಲಿ ನಡೆಯಿತು. ಒಟ್ಟು ಏಳು ಶಾಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದು- ಆರು, ಏಳು, ಎಂಟನೇ ವರ್ಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. LEAD WITH COMPASSION (ಸಹಾನುಭೂತಿಯೆಡೆಗೆ….) ಎಂಬ ವಸ್ತು ವಿಷಯದ ಅಡಿಯಲ್ಲಿ ಅದ್ಭುತವಾಗಿ ತಮ್ಮ ಕಲಾವಂತಿಕೆಯನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದು, ಸ್ಥಳದಲ್ಲಿಯೇ- ಉತ್ತಮವಾಗಿ ಮೂಡಿ ಬಂದ ಪ್ರಥಮ, ದ್ವಿತೀಯ, ತೃತೀಯ ಸ್ಥಾನದ ಚಿತ್ರಗಳನ್ನು ಆಯ್ಕೆ ಮಾಡಲಾಯಿತು. ಪ್ರಥಮ, ದ್ವಿತೀಯ, ಹಾಗೂ ತೃತೀಯ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡಂತೆ ಒಟ್ಟು ನಾಲ್ಕು ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದಿದ್ದಾರೆ. ನೀಲೆಕಣಿ ಸರಕಾರಿ ಪ್ರೌಢ ಶಾಲೆಯ ಕುಮಾರಿ ಖುಷಿ ಗಜಾನನ್ ಶೇಟ್ (8ನೇ ವರ್ಗ) ಪ್ರಥಮ ಬಹುಮಾನ, ದ್ವಿತೀಯ ಸ್ಥಾನದಲ್ಲಿ ಕುಮಾರಿ ರಜನಿ ನಾಗರಾಜ್ ಗೌಡ ಸರಕಾರಿ ಪ್ರಾಥಮಿಕ ಶಾಲೆ ಗಾಂಧಿನಗರ ಶಿರಸಿ, ಹಾಗೂ ತೃತೀಯ ಸ್ಥಾನದಲ್ಲಿ ಶಿರಸಿ ಲಯನ್ಸ್ ಶಾಲೆಯ 7ನೇ ವರ್ಗದ ವಿದ್ಯಾರ್ಥಿನಿ ಕುಮಾರಿ ಸಿಂಚನಾ ಹೆಗಡೆ ಮತ್ತು ಕುಮಾರಿ ಸಿರಿ. ಪಿ. ಜೋಶಿ ಚಂದನ ಪ್ರೌಢಶಾಲೆ ನರೇಬೈಲ್ ಆಯ್ಕೆಗೊಂಡರು. ಪಾಲ್ಗೊಂಡಂತಹ ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ವಿಜೇತ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನಗಳನ್ನು ನೀಡಲಾಯಿತು.
    ನಿರ್ಣಾಯಕರಾಗಿ ಶ್ರೀ ಜಿ.ಎಂ. ಬೊಮ್ನಳ್ಳಿ ಇವರು ಆಗಮಿಸಿದ್ದರು. ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾದ ಎಂ. ಜೆ. ಎಫ್. ಲಯನ್ ರಮಾ ಪಟವರ್ಧನ್ ನಿರ್ವಹಿಸಿಕೊಟ್ಟರು. ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಎಂ ಜೆ ಎಫ್ ಲಯನ್ ತ್ರಿವಿಕ್ರಮ್ ಪಟವರ್ಧನ್ ಅವರು ಉಪಸ್ಥಿತರಿದ್ದರು. ಟ್ರೆಸರರ್ ಆದ ಲಯನ್ ರಾಜಲಕ್ಷ್ಮಿ ಹೆಗಡೆ, ಲಯನ್ ಸುಚೇತಾ ಪಟವರ್ಧನ್, ಲಯನ್ ಜ್ಯೋತಿ ಭಟ್ , ಲಯನ್ ಶರಾವತಿ ಭಟ್ ಇವರುಗಳು ಉಪಸ್ಥಿತರಿದ್ದರು. ಆಗಮಿಸಿದಂತ ಪಾಲಕ ವರ್ಗ ಹಾಗೂ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಕಲೆಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top