Slide
Slide
Slide
previous arrow
next arrow

ಜ್ಞಾನವನ್ನು ಮಾರಾಟಕ್ಕಿಡದೆ, ಗಡಿಯಾಚೆಗೂ ಹಂಚುವ ಸಂಸ್ಕೃತಿ ಇರುವುದು ಶಿಕ್ಷಕರು ಹಾಗೂ ಬಾಣಸಿಗರಲ್ಲಿ:ಆತ್ರೇಯ

300x250 AD

ಶಿರಸಿ: ಜ್ಞಾನವನ್ನು ಮಾರಾಟಕ್ಕಿಡದೆ, ಗಡಿಯಾಚೆಗೂ ಹಂಚಿಕೊಳ್ಳುವ ಉನ್ನತ ಸಂಸ್ಕೃತಿ ಕಾಣಬರುರುವುದು ಶಿಕ್ಷಕರು ಹಾಗೂ ಬಾಣಸಿಗರಲ್ಲಿ ಮಾತ್ರ. ಆದರೆ ಇದನ್ನು ಸೂಕ್ತವಾಗಿ ಗುರುತಿಸಿ ಗೌರವಿಸಬೇಕಾಗಿದೆ ಎಂದು ಅಕ್ವಾ ಬಯೋ-ಸೊಲ್ಯೂಷನ್ಸ್- ಬೆಂಗಳೂರಿನ  ಆತ್ರೇಯ ಹೇಳಿದರು.

  ಅವರು ನಗರದ ಎಂ. ಎಂ. ಕಾಲೇಜಿನ ಐಕ್ಯುಏಸಿ ಸಹಯೋಗದಲ್ಲಿ ‘ಇನ್ಸ್ಟಿಟ್ಯೂಷನ್ಸ್ ಇನ್ನೋವೇಷನ್ ಕೌಂನ್ಸಿಲ್’ ಘಟಕವು ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. 

“ಬೌದ್ಧಿಕ ಆಸ್ತಿ ಹಕ್ಕು,ರಕ್ಷಣೆ ಹಾಗೂ ಉದ್ಯಮಶೀಲತೆ” ಎಂಬ ವಿಷಯದ ಕುರಿತು ಆಯೋಜಿತವಾಗಿದ್ದ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಹಾಗೂ ಉಪನ್ಯಾಸಕರನ್ನು ಉದ್ಧೇಶಿಸಿ ಮಾತನಾಡಿದ ಅವರು ಉದ್ಯಶೀಲತೆಯನ್ನು ಬೆಳೆಸಿಕೊಳ್ಳುವ ಬಗೆ ಹಾಗೂ ಇಂದಿನ ಬೃಹತ್ ಉದ್ದಿಮೆಗಳು ಬೆಳೆಯುತ್ತಿರುವ ಕುರಿತು ವಿಸ್ತಾರವಾಗಿ ತಿಳಿಸಿದರು. ‘ಬೌದ್ಧಿಕ ಆಸ್ತಿ ರಕ್ಷಣೆ’ ‘ಪೆಟೆಂಟ್’ ಕುರಿತ ಅನೇಕ ಕಾನೂನಾತ್ಮಕ ಅಂಶಗಳನ್ನು ವಿವರಿಸಿದ ಅವರು, ಪ್ರೊಡಕ್ಟ್ ಹಾಗೂ ಪ್ರೊಸೆಸ್ – ಪೆಟೆಂಟ್ ಗಳ ವೈತ್ಯಾಸ ಹಾಗೂ ಪ್ರಾಮುಖ್ಯತೆ ಕುರಿತು ಸೋದಾಹರಣವಾಗಿ ಮಾಹಿತಿ ನೀಡಿದರು. ಫಾರ್ಮಾ ಕಂಪನಿಗಳ ಪೆಟೆಂಟ್ ಗಳು ಹಾಗೂ ‘ತಿರುಪತಿ ಲಡ್ಡು’ ಗೆ ಮಾಡಿಕೊಂಡ ಪೆಟೆಂಟ್ ಗಳ ಕುರಿತು ತಿಳಿಸಿದರು. ಪೆಟೆಂಟ್ ನಿಯಮ ಉಲ್ಲಂಘನೆಯ ಕಾನೂನು ಸಮರಗಳ ಕುರಿತ ನೈಜ ಘಟನೆಗಳ ವಿವರ, ಹಾಗೂ ಕೃಷಿಕರ ಹಕ್ಕು ಕಾಯುವಲ್ಲಿ ಪೆಟೆಂಟಗಳ ಪಾತ್ರವನ್ನು ತಿಳಿಸಿದರು. ಸಿದ್ದಾಪುರ ತಾಲೂಕಿನ ಕಾನಸೂರು-ಹುಣಸೆಕೊಪ್ಪದ ರಮಾಕಾಂತ ಹೆಗಡೆಯವರು “ಸಿಗಂಧಿನಿ” ಎಂಬ ವಿಶೇಷ ಕರಿಮೆಣಸಿನ ತಳಿಗೆ ಪೆಟೆಂಟ್ ಮಾಡಿಸಿದನ್ನು ತಿಳಿಸಿದರು.

300x250 AD

ಟ್ರೇಡ್ ಮಾರ್ಕ್, ಲೋಗೊ, ವಿನ್ಯಾಸ, ಕುಶಲಕಲೆ, ಭೌಗೋಳಿಕ ಸೂಚಕಗಳು, ಮುಂತಾದ ವಿಷಯಗಳಲ್ಲಿ ಕೃತಿಸ್ವಾಮ್ಯದ ಕುರಿತು ವಿವರಿಸಿದ ಆತ್ರೇಯ ಅವರು ಈ ಪೆಟೆಂಟ್ ಗಳ ವಿರುದ್ಧ ಮಗ್ಗುಲಾದ ‘ಓಪನ್ ಸೋರ್ಸ್’ ಅಂದರೆ ಕೃತಿಸ್ವಾಮ್ಯಕ್ಕೊಳಪಡದೆ ಎಲ್ಲರಿಗೂ ಉಚಿತವಾಗಿ ಲಭ್ಯವಿರುವ ಜ್ಞಾನಸಂಗ್ರಹಗಳ ಕುರಿತೂ ಬೆಳಕು ಚಿಲ್ಲಿದ್ದು ವಿಶೇಷವಾಗಿತ್ತು. ಜೊತೆಗೆ, ವಿದ್ಯಾರ್ಥಿಗಳು ಉದ್ಯಮಶೀಲರಾಗುವ ಪೂರ್ವದಲ್ಲಿ ಸಾಕಷ್ಟು ಋಣಾತ್ಮಕ ಪ್ರಶ್ನೆಗಳನ್ನೂ ಹಾಕಿಕೊಂಡು ಅವುಗಳಿಗೆ ಉತ್ತರ ಹುಡುಕುವ ಕ್ಷಮತೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಉದ್ಯಮದ ಆರಂಭ, ಅನಂತರ ಮತ್ತು ನಿರಂತರವಾಗಿ- “ಸ್ವಾಟ್- ಅನಾಲಿಸಿಸ್” (ಸ್ಟ್ರೆನ್ತ್-ಸತ್ವ, ವೀಕ್ನೆಸ್-ದೌರ್ಬಲ್ಯ, ಅಪಾರ್ಚ್ಯುನಿಟಿ-ಅವಕಾಶ, ಥ್ರೆಟ್-ಬೆದರಿಕೆ) ಮಾಡಿಕೊಳ್ಳಲೇಬೇಕಾಗುತ್ತದೆ, ಎಂದು ತಿಳಿಸಿದರು. 

ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಐಐಸಿ-ಘಟಕದ ಅಧ್ಯಕ್ಷರಾದ ಡಾ. ಗಣೇಶ ಎಸ್. ಹೆಗಡೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಪ್ರೊ. ರವಿಕುಮಾರ ಕೋಳೇಕರ್ ವಂದಿಸಿದಿರೆ, ಡಾ. ಅನೀಲಕುಮಾರ ಹೆಗಡೆಯವರು ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top