ಸಿದ್ದಾಪುರ: ತಾಲೂಕಿನ ಹಳದಕಟ್ಟಾ ಪ್ರೌಢಶಾಲೆಯಲ್ಲಿ ನಡೆದ ಸಿದ್ದಾಪುರ ತಾಲೂಕಾ ಹಂತದ ಪ್ರತಿಭಾಕಾರಂಜಿಯಲ್ಲಿ ಬಿದ್ರಕಾನಿನ ಎಂ.ಜಿ.ಸಿ.ಎಂ.ಪ್ರೌಢಶಾಲೆ, ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಮಿಮಿಕ್ರಿಯಲ್ಲಿ ಧನ್ಯಶ್ರೀ ಎಚ್. ನಾಯ್ಕ ಪ್ರಥಮ, ಗಝಲ್ ಸ್ಪರ್ಧೆಯಲ್ಲಿ ಗೌರವ. ಪಿ. ಭಟ್ಟ ಪ್ರಥಮ ಹಾಗೂ ಹಾಸ್ಯ ಸ್ಪರ್ಧೆಯಲ್ಲಿ ಸಿಂಧೂರ ಪಿ. ಹೆಗಡೆ ಪ್ರಥಮಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾಆಡಳಿತ ಮಂಡಳಿ, ಮುಖ್ಯಾಧ್ಯಾಪಕರು, ಶಿಕ್ಷಕರು, ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರತಿಭಾ ಕಾರಂಜಿ; ಜಿಲ್ಲಾ ಮಟ್ಟಕ್ಕೆ ಬಿದ್ರಕಾನ್ ವಿದ್ಯಾರ್ಥಿಗಳು
