ಸಿದ್ದಾಪುರ : ಸಿದ್ದಾಪುರದ ಬಾಲಿಕೊಪ್ಪ ಶಾಲೆಯ 310 ಮಕ್ಕಳಿಗೆ ಟೀಮ್ ಪರಿವರ್ತನೆ ಕಡೆಯಿಂದ ಪಟ್ಟಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿತೇಂದ್ರ ನಾಯ್ಕ ಮಾತನಾಡಿ “ಅರ್ಧ ವಿದ್ಯೆಯನ್ನು ಕಲಿಯಬೇಡಿ ಇದರಿಂದ ಗೆಲುವು ಸಾಧ್ಯವಿಲ್ಲ, ಪೂರ್ತಿ ವಿದ್ಯೆ ಕಲಿಯಿರಿ. ವಿದ್ಯೆ ಕಲಿಯುವ ಉದ್ದೇಶ ಒಳ್ಳೆಯದಾಗಿರಲಿ, ಒಳ್ಳೆ ಉದ್ದೇಶ ಇಟ್ಟುಕೊಂಡು ವಿದ್ಯೆ ಕಲಿತರೆ ಆ ವಿದ್ಯೆ ಮರೆತು ಹೋಗಲು ಸಾಧ್ಯವಿಲ್ಲ” ಎಂದರು. ಮುಂದುವರೆದು ಮಾತನಾಡಿದ ಅವರು ಸಮಸ್ಯೆಗಳು ಎಲ್ಲೇ ಕಂಡರೂ ಅಲ್ಲೇ ಧ್ವನಿ ಎತ್ತಬೇಕು, ರೋಡ್ ಸರಿ ಇಲ್ಲ, ಆಸ್ಪತ್ರೆಯಲ್ಲಿ ವ್ಯವಸ್ಥೆ ಯಾಕೆ ಇಲ್ಲ, ನಮಗೆ ಇಂಜಿನಿಯರ್ ಕಾಲೇಜು ಯಾಕೆ ಇಲ್ಲ ಎಂಬುದರ ಬಗ್ಗೆ ಧ್ವನಿ ಎತ್ತುವುದು ಅನಿವಾರ್ಯ, ಯಾಕೆಂದರೆ ಆಸ್ಪತ್ರೆ, ರಸ್ತೆ, ಶಾಲೆ ಹೀಗೆ ಎಲ್ಲಾ ಸರಕಾರಿ ಕೆಲಸಗಳು ಆಗುತ್ತಿರುವುದು ನಿಮ್ಮ ಅಪ್ಪ ಅಮ್ಮ ಕಷ್ಟಪಟ್ಟು ಕಟ್ಟಿರೋ ಟ್ಯಾಕ್ಸ್ ಇಂದಾನೆ. ಎಂದು ಮಕ್ಕಳಿಗೆ ಸರಕಾರ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ನೀಡಿದರು. ಮಕ್ಕಳಿಗೆ ನಿಮ್ಮ ನಿಮ್ಮ ಮನೆಯಲ್ಲೇ ನಿಮ್ಮ ಅಪ್ಪ ಅಮ್ಮ ದುಡ್ಡು ತೆಗೆದುಕೊಂಡು ಓಟ್ ಹಾಕದಂತೆ ಅಭಿಯಾನ ಮಾಡಿ ಎಂದು ಕರೆ ಕೊಟ್ಟರು.