Slide
Slide
Slide
previous arrow
next arrow

ಸೆ.29 ರಂದು ಅಂಕೋಲಾ ಉಪ್ಪಿನ ಸತ್ಯಾಗ್ರಹ ನಾಟಕ ಪ್ರದರ್ಶನ

300x250 AD

ಅಂಕೋಲಾ : ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಅಂಗ ಸಂಸ್ಥೆಯಾದ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ ನಾಗಪುರ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸ್ವಾತಂತ್ರ‍್ಯ ಹೋರಾಟಗಾರರ ಸ್ಮಾರಕ ಸಾಂಸ್ಕೃತಿಕ ಭವನದಲ್ಲಿ ಸೆಪ್ಟೆಂಬರ್ 29 ರಂದು ಬೆಳಿಗ್ಗೆ 11ಕ್ಕೆ ಅಂಕೋಲಾದ ಉಪ್ಪಿನ ಸತ್ಯಾಗ್ರಹದ ಮೂಲಕ ನಡೆದ ಸ್ವಾತಂತ್ರ‍್ಯ ಹೋರಾಟವನ್ನು ನೆನಪಿಸುವ ಅಂಕೋಲಾ ಉಪ್ಪಿನ ಸತ್ಯಾಗ್ರಹ ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಮಾಲೂರು ವಿಜಿ ತಿಳಿಸಿದರು.
ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ ನಾಗಪುರ ಮತ್ತು ರಂಗ ವಿಜಯಾ ಟ್ರಸ್ಟ್ , ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಅಂಕೋಲಾದಲ್ಲಿ ನಡೆದ ಹೋರಾಟವನ್ನು ಜನತೆಗೆ ತಲುಪಿಸುವ ಉದ್ದೇಶವನ್ನು ಈ ನಾಟಕ ಹೊಂದಿದೆ. ಮಾಲೂರು ವಿಜಿ ಅವರ ಮಾರ್ಗದರ್ಶನದಲ್ಲಿ ಬಾಷ್ ರಾಘವೇಂದ್ರ ನಿರ್ದೇಶನದ ಅಂಕೋಲಾ ಉಪ್ಪಿನ ಸತ್ಯಾಗ್ರಹ ನಾಟಕ ರೂಪಗೊಂಡಿದ್ದು ನಮ್ಮ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಅಂಕೋಲಾ ಮತ್ತು ಸೂರ್ವೆ ಜನತೆ ನಡೆಸಿದ ಹೋರಾಟದ ಮಹತ್ತರ ಘಟನೆಗಳನ್ನು ಈ ನಾಟಕ ಒಳಗೊಂಡಿದೆ.
ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು ಕಾರವಾರ ಅಂಕೋಲಾದ ಶಾಸಕರಾದ ರೂಪಾಲಿ ಸಂತೋಷ ನಾಯ್ಕ ರವರು ಉದ್ಘಾಟಿಸಲಿದ್ದಾರೆ. ಪುರಸಭೆ ಅಧ್ಯಕ್ಷೆ ಶಾಂತಲಾ ಅರುಣ ನಾಡಕರ್ಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಗಪುರ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ದೀಪಕ್ ಖಿರ್ವಾಡ್ಕರ್ , ಪುರಸಭೆಯ ಉಪಾಧ್ಯಕ್ಷರಾದ ರೇಖಾ ದಿನಕರ ಗಾಂವ್ಕರ್ , ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಧರ್ ನಾಯ್ಕ, ತಹಸೀಲ್ದಾರ್ ಉದಯ.ವಿ. ಕುಂಬಾರ, ತಾಲೂಕು ಪಂಚಾಯತ್ ನ ಕಾರ್ಯ ನಿರ್ವಹಣಾಧಿಕಾರಿ ಗಳಾದ ಪಿ. ವೈ. ಸಾವಂತ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಲ ಲಕ್ಷ್ಮಿ ಎಂ. ಪಾಟೀಲ,
ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ನರೇಂದ್ರ ನಾಯಕ , ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಮಾಲೂರು ವಿಜಿ ಪಾಲ್ಗೊಳ್ಳಲಿದ್ದಾರೆ . ಖ್ಯಾತ ಸ್ವಾತಂತ್ರ‍್ಯ ಹೋರಾಟದ ದಾಖಲೆಕಾರರು, ಹಿರಿಯ ಸಾಹಿತಿಗಳಾದ ಶಾಂತಾರಾಮ ನಾಯಕ ಹಿಚ್ಕಡ, ಸ್ವಾತಂತ್ರ‍್ಯ ಹೋರಾಟಗಾರರ ಕುಟುಂಬದವರಾದ ಪ್ರೋ. ವಸಂತ ನಾಯಕ ಸೂರ್ವೆ ಇವರಿಗೆ ಸ್ವಾತಂತ್ರ‍್ಯ ಹೋರಾಟಗಾರರ ಪರವಾಗಿ ಗೌರವ ಸಮರ್ಪಣೆ ಮಾಡಲಾಗುವುದು. ರಂಗಭೂಮಿ ನಿರ್ದೇಶಕ ಪತ್ರಕರ್ತ ಕೆ. ರಮೇಶ್ ರವರಿಗೆ ರಂಗ ಗೌರವ ಸಹ ಹಮ್ಮಿಕೊಂಡಿದೆ .
ಈ ನಾಟಕ ಪ್ರದರ್ಶನ ವೀಕ್ಷಿಸುವ ಮೂಲಕ ಸ್ವಾತಂತ್ರ‍್ಯಕ್ಕಾಗಿ ಹೋರಾಡಿ ಹುತಾತ್ಮರಾದ ಹೋರಾಟಗಾರರನ್ನು ಸ್ಮರಿಸಲು ತಾಲ್ಲೂಕಿನ ಜನತೆ ಆಗಮಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಮಾಲೂರು ವಿಜಿ ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top