• Slide
    Slide
    Slide
    previous arrow
    next arrow
  • ಅಂಬೇವಾಡಿಯಲ್ಲಿ ರೋಟರಿ ಶಾಲೆಯ ಹಳೆ ವಿದ್ಯಾರ್ಥಿಗಳ ಪುನರ್ಮಿಲನ

    300x250 AD

    ದಾಂಡೇಲಿ : ನಗರದ ರೋಟರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 2002 ಮತ್ತು 2005ನೇ ಸಾಲಿನಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಸೇರಿ ಅಂಬೇವಾಡಿಯ ಶ್ರೀಯೋಗ್ ಇನ್ ರೆಸಾರ್ಟಿನ ಸಭಾಭವನದಲ್ಲಿ ಪುನರ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
    ನಗರದ ರೋಟರಿ ಶಾಲೆಯ 2002ರ 7ನೇ ತರಗತಿ ಮತ್ತು 2010 ರ 10ನೇ ತರಗತಿಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ತಮ್ಮ ಅವಧಿಯಲ್ಲಿ ಕಲಿಸಿದ ರೋಟರಿ ಹಿ. ಪ್ರಾಥಮಿಕ ಮತ್ತು ಪ್ರೌಢಶಾಲೆಯ ನಿವೃತ್ತ ಶಿಕ್ಷಕರನ್ನು, ಹಾಲಿಯಿರುವ ಶಿಕ್ಷಕರನ್ನು ಹಾಗೂ ಇಲ್ಲಿ ಸೇವೆ ಸಲ್ಲಿಸಿ ಬೇರೆಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
    ಇದೇ ಸಂದರ್ಭದಲ್ಲಿ ರೋಟರಿ ಶಾಲೆಯಲ್ಲಿ ಅನುಪಮ ಸೇವೆ ಸಲ್ಲಿಸಿ ನಿಧನರಾಗಿರುವ ಮುಖ್ಯೋಪಾಧ್ಯಯರುಗಳಾದ ಗಣೇಶ ಹೆಬ್ಬಾರ್ ಮತ್ತು ಮಹಾದೇವ್ ಅವರನ್ನು ಸ್ಮರಿಸಿ, ನುಡಿನಮನವನ್ನು ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳು ತಮಗೆ ಕಲಿಸಿದ ಗುರುಗಳೊಂದಿಗೆ ವಿದ್ಯಾರ್ಥಿ ಸಮಯದಲ್ಲಿನ ವಿವಿಧ ಚಟುವಟಿಕೆಗಳನ್ನು ಮೆಲುಕು ಹಾಕಿಕೊಂಡರು. ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಅದೇಷ್ಟೋ ಕೀಟಲೆಗಳನ್ನು ಸಹಿಸಿ, ತಿದ್ದಿ ತೀಡಿದ ಗುರುಗಳ ಕಲಿಕಾ ವಿಧಾನವನ್ನು ಹಳೆ ವಿದ್ಯಾರ್ಥಿಗಳು ಸ್ಮರಿಸಿಕೊಂಡರು. ನಮಗೆ ಆರೋಗ್ಯದಲ್ಲಿ ಏರುಪೇರಾದಾಗ ಶಿಕ್ಷಕ ವೃಂದದವರು ತಾಯಿ ವಾತ್ಸಲ್ಯ ನೀಡಿರುವುದನ್ನು ಕೆಲ ಹಳೆ ವಿದ್ಯಾರ್ಥಿಗಳು ನೆನಪಿಸಿದಾಗ ಅಲ್ಲಿದ್ದವರೆಲ್ಲರ ಕಣ್ಣಂಚಿನಲ್ಲಿ ಆನಂದಭಾಷ್ಟವೆ ಹರಿದು ಬಂತು.
    ಶಿಕ್ಷಕರುಗಳ ಯೋಗಕ್ಷೇಮವನ್ನು ವಿಚಾರಿಸಿದ ಬಳಿಕ, ಹಳೆ ವಿದ್ಯಾರ್ಥಿಗಳ ಜೀವನ ಸ್ಥಿತಿಯನ್ನು ಶಿಕ್ಷಕಕರು ವಿಚಾರಿಸಿದರು. ನಾವೆಲ್ಲರೂ ಬದುಕಿನಲ್ಲಿ ಯಶಸ್ಸಿನೆಡೆಗೆ ಸಾಗುತ್ತಿದ್ದೇವೆಯೆಂದರೇ ಅದಕ್ಕೆ ಕಶರಣ ರೋಟರಿ ಶಾಲೆ ಮತ್ತು ರೋಟರಿ ಶಾಲೆಯ ಗುರುಗಳು ಮತ್ತು ಗುರುಮಾತೆಯರು. ಕಲಿಸಿದ ಗುರುಗಳನ್ನು ಸ್ಮರಿಸಿ, ಗೌರವಿಸಿ ಅವರ ಜೊತೆ ಕೆಲ ಹೊತ್ತು ಸಮಯ ಕಳೆಯಬೇಕೆಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಹಳೆ ವಿದ್ಯಾರ್ಥಿಗಳು ಹೇಳಿದರು.
    ಕಾರ್ಯಕ್ರಮದಲ್ಲಿ ಅಂದು ಶಾಲಾ ಅವಧಿಯಲ್ಲಿ ಮಾಡಿದ್ದ ನೃತ್ಯ, ಮಿಮಿಕ್ರಿ, ಕಥೆ, ಕವನ ವಾಚನವನ್ನು ಕೆಲ ಹಳೆ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಕೆಲ ಹಳೆ ವಿದ್ಯಾರ್ಥಿಗಳು ಟೀಚರ್ ಟೀಚರ್ ಅಂದು ನೀವು ಕಿವಿ ಹಿಂಡಿದ್ದೀರಿ, ಆ ಸರ್ ನನಗೆ ಹೊಡೆದಿದ್ದರೂ, ಅದರ ಫಲಶೃತಿಯಾಗಿ ಇವತ್ತು ನಾವು ಒಳ್ಳೆಯ ಶಿಕ್ಷಣವನ್ನು ಪಡೆದು ಕೈತುಂಬ ಸಂಬಳ ಪಡೆದುಕೊಳ್ಳುತ್ತಿದ್ದೇವೆ ಎಂದು ತಮ್ಮ ಬದುಕಿನ ಪ್ರಗತಿಯನ್ನು ವಿವರಿಸಿದರು.
    ಕಾರ್ಯಕ್ರಮದಲ್ಲಿ ಕಲಿಸಿದ ಗುರುಗಳು ಮತ್ತು ಗುರುಮಾತೆಯರಾದ ಮಹಾದೇವಿ ಕಾಚಾಪುರ, ಕೃಷ್ಣ ನಾಯ್ಕ, ಬಸವರಾಜ ಇಳಿಗೇರ, ಮೋಹನ ಪತ್ತಾರ್, ನಾಗರತ್ನ ಪಡಸಲಗಿ, ಮೂಕಾಂಬಿಕಾ, ಇಂದಿರಾ ಮಿರಾಶಿ, ಶೋಭಾ ಮುದ್ದಣ್ಣ, ಶಾಲಿನಿ ಲೂಪಿಸ್, ರಾಜಶ್ರೀ ನಾಯ್ಕ, ಕಲ್ಪನಾ ನಾಯ್ಕ, ನಿರ್ಮಲ ಮೊದಲಾದವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.
    ಸನ್ಮಾನಿತ ಶಿಕ್ಷಕ/ಶಿಕ್ಷಕಿಯರು ಹಳೆ ವಿದ್ಯಾರ್ಥಿಗಳ ಈ ಪುನರ್ಮಿಲನ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ರೋಟರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತಿಯೊಂದಿಗೆ ಸಮಾಜಕ್ಕೊಂದು ಶಕ್ತಿಯಾಗಬೇಕೆಂದು ಕರೆ ನೀಡಿದರು.
    ಒಟ್ಟು 52 ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಕಾರ್ಯಕ್ರಮ ಹಳೆ ವಿದ್ಯಾರ್ಥಿಗಳಾದ ರೋಶನ್ ಡಿಸೋಜಾ, ಹರೀಶ ಬಡ್ಡೆರ, ಪೊಮಣ್ಣ ಸವದತ್ತಿ, ಮಹೇಶ ಪುರಾಣಿಕ್, ಸಂಜು, ಜಗದೀಶ, ಖುತೇಜ, ಮೊದಲಾದವರು ಅಚ್ಚುಕಟ್ಟಾಗಿ ಸಂಘಟಿಸಿದ್ದರು. ಮಹೇಶ ಪುರಾಣಿಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ರೋಶನ್ ವಂದಿಸಿದರು. ಶ್ರೀದೇವಿ ಜಾಡಗೌಡರ ಕಾರ್ಯಕ್ರಮ ನಿರೂಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top