Slide
Slide
Slide
previous arrow
next arrow

ಬಿಜೆಪಿ ಮಹಿಳಾ ಮೋರ್ಚಾ ಸೇವಾ ಪಾಕ್ಷಿಕ ಸಮಾರೋಪ

300x250 AD

ಕಾರವಾರ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಅಂಗವಾಗಿ ಸೇವಾ ಪಾಕ್ಷಿಕ ಅಡಿಯಲ್ಲಿ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ‘ಆದರ್ಶ ಅಂಗನವಾಡಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ಗ್ರಾಮೀಣ ಪ್ರದೇಶದ ಅಸ್ನೋಟಿಯ ಕೃಷ್ಣಾಪುರ ಅಂಗನವಾಡಿಯಲ್ಲಿ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾಲಾ ಹುಲಸ್ವಾರ, ಉಪಾಧ್ಯಕ್ಷೆ ವಂದನಾ ಶಿರೋಡ್ಕರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಶ್ವೇತಾ ಭಟ್ಕಳಕರ್ ಎಲ್ಲರನ್ನು ಸ್ವಾಗತಿಸಿದರು. ನಂತರ ಅಂಗನವಾಡಿ ಮಕ್ಕಳಿಗೆ ಪಟ್ಟಿ, ಪೆನ್ನು, ಪೆನ್ಸಿಲ್ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಮಾಳ್ಸೇಕರ ವಂದನಾರ್ಪಣೆ ಸಲ್ಲಿಸಿದರು. ಅಂಗನವಾಡಿ ಶಿಕ್ಷಕಿ ಕಲ್ಪನಾ ನಾಯ್ಕ, ಸಹಾಯಕಿ ಪ್ರಗತಿ ನಾಯ್ಕ, ಬಾಲವಿಕಾಸ ಕಮಿಟಿಯ ಅಧ್ಯಕ್ಷೆ ಸುಲಕ್ಷಾ ಗಜೀನಕರ, ಕಲ್ಪನಾ ಸಾಳಸ್ಕರ್, ಸುವರ್ಣ ಮಜಾಳಿಕರ್ ಮತ್ತು ಸ್ಥಳೀಯರು ಉಪಸ್ಥಿತರಿದ್ದು ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top