Slide
Slide
Slide
previous arrow
next arrow

ಅನಾಥಾಶ್ರಮದ ಕಟ್ಟಡ ಕಾಮಗಾರಿಗೆ ನೆರವು ನೀಡಲು ಕೋರಿಕೆ

300x250 AD

ಸಿದ್ದಾಪುರ: ತಾಲೂಕಿನ ಮುಗದ್ದೂರಿನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಶ್ರಮದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಟ್ಟುವ ಜಾಗಕ್ಕೆ ಮಣ್ಣು ಹಾಕಿ ಲೆವಲ್ ಮಾಡಲಾಗಿದೆ. ಈ ಮೂಲಕ ಆಶ್ರಮದ ಕಟ್ಟಡ ಕಟ್ಟಲು ಪ್ರಾರಂಭಿಸಿಲಾಗಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಸಾರ್ವಜನಿಕರ, ಸಹೃದಯಿಗಳ ಸಹಕಾರ ಬೇಕಾಗಿದೆ.
ಆಶ್ರಮದ ಕಟ್ಟಡ ಕಟ್ಟಲು ಜಲ್ಲಿ, ಮರಳು, ಕೆಂಪುಕಲ್ಲು, ಸಿಮೆಂಟ್, ಕಬಿಣದ ರಾಡ್, ಕಬ್ಬಿಣದ ಎಂಗಲ್, ಕಬ್ಬಿಣದ ಸೀಟ್ ಗಳ ಅವಶ್ಯಕತೆ ಇದೆ. ನಿಮ್ಮ ಕಡೆಯಿಂದ ಒಂದು ಲೋಡು ಜಲ್ಲಿ, ಮರಳು, ಕೆಂಪು ಕಲ್ಲು, ಕಬ್ಬಿಣದ ಆ್ಯಂಗಲ್, ಕಬ್ಬಿಣದ ರಾಡ್ ಅಥವಾ ಇತರೆ ಅಗತ್ಯ ವಸ್ತುಗಳನ್ನು ನೀಡಿದರೆ ಕಾಮಗಾರಿಗೆ ಅನುಕೂಲವಾಗುತ್ತದೆ.
ಸಾರ್ವಜನಿಕರು ನೀಡುವ ಪ್ರತಿಯೊಂದು ವಸ್ತುಗಳು ಅಮೂಲ್ಯ ವಾಗಿದ್ದು. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಶ್ರಮ ವಾಸಿಗಳ ಶುಭಹಾರೈಕೆ ಹಾಗೂ ದೇವರ ಆಶೀರ್ವಾದ ದೊರೆಯಲಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಹಣಕಾಸಿನ ಸಹಾಯ ಮಾಡುವವರು ಅನಾಥಾಶ್ರಮದ ಖಾತೆಗೆ ಹಣ ಸಂದಾಯ ಮಾಡಬಹುದು ಎಂದು ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಶ್ರಮ ಸೇವಾ ಸಮಿತಿ ರಾಷ್ಟ್ರೀಯ ಅಧ್ಯಕ್ಷ ನಾಗರಾಜ ನಾಯ್ಕ ಕೋರಿದ್ದಾರೆ.


ಬ್ಯಾಂಕ್ ಖಾತೆ ವಿವರ
PUNITH RAJKUMAR ASHRAYADHAMA ANATHASHRAMA SEVA SAMITI TRUST

A/C No : 40918142470

IFSC Code : SBIN0040131

300x250 AD

Bank Name : State bank of India

Branch : Siddapur

Phone Pe: 9481389187

Share This
300x250 AD
300x250 AD
300x250 AD
Back to top