ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಜಲಾಶಯ ಆವರಣದಲ್ಲಿ 3 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕ್ಯೂಟ್ ಹೌಸ್ (ಐಬಿಯನ್ನು) ಸಚಿವ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ ಬುಧವಾರ ಉದ್ಘಾಟಿಸಲಿದ್ದಾರೆ.
ಉದ್ಘಾಟನೆಯ ನಂತರ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಲಿದೆ. 4059 ಲೆಕ್ಕ ಶೀರ್ಷಿಕೆಯಲ್ಲಿ ಪಟ್ಟಣದಲ್ಲಿ ನಿರೀಕ್ಷಣಾ ಮಂದಿರದ ಹೊಸ ಕಟ್ಟಡ ನಿರ್ಮಾಣ, ರಾಜ್ಯ ಹೆದ್ದಾರಿ ಅಭಿವೃದ್ಧಿಯೋಜನೆ ಹಂತ-4, ಘಟ್ಟ-2ರ ಅಡಿಯಲ್ಲಿ ತಾಲೂಕಿನ ಮುಂಡಗೋಡ ತಾಲೂಕಿನ ಕಾರವಾರ-ಇಳಕಲ್ (ರಾಜ್ಯ ಹೆದ್ದಾರಿ-06) ಕಿ.ಮೀ 125.80 ರಿಂದ 146.10 ರವರೆಗೆ ರಸ್ತೆ ಸುಧಾರಣೆ (ಆಯ್ದ ಭಾಗಗಳಲ್ಲಿ) ,3054 ರಾಜ್ಯ ಹೆದ್ದಾರಿ ನಿರ್ವಹಣೆ ಅಡಿ ಕಾರವಾರ-ಇಳಕಲ್ (ರಾಜ್ಯ ಹೆದ್ದಾರಿ-06) ಕಿ.ಮೀ 148.20 ರಿಂದ 155.20 ರವರೆಗೆ. ಕಿ.ಮೀ 3.75 ಮೀ ನಿಂದ 5.50 ಮೀ ವರೆಗೆ ಮರುಡಾಂಬರೀಕರಣ ಮಾಡುವುದು, ಇದಲ್ಲದೇ 5054 ರಾಜ್ಯ ಹೆದ್ದಾರಿ ಕಾಮಗಾರಿ ನಿರ್ವಹಣೆ ಅಡಿ ಕಾರವಾರ – ಇಳಕಲ್ ರಸ್ತೆರಾಜ್ಯ ಹೆದ್ದಾರಿ 06 ಕಿ.ಮೀ 148.20ರಿಂದ 155.20 ರವರೆಗಿನ ಕಿ. ಮೀ 3.75 ಮೀ ನಿಂದ 5.50 ಅಗಲಿಕರಣ ಮಾಡುವುದು ( ಅಂದಾಜು ಮೊತ್ತ ರೂ.31.30 ಕೋಟಿ) ಕಾಮಗಾರಿಗಳ ಶಂಕುಸ್ಥಾಪನಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಇಲಾಖೆ ಸಚಿವರಾದ ಸಿ.ಸಿ ಪಾಟೀಲ್, ಕಾರ್ಮಿಕ ಸಚಿವರು, ಸ್ಥಳೀಯ ಶಾಸಕರಾದ ಶಿವರಾಮ್ ಹೆಬ್ಬಾರ್, ಸಂಸದರಾದ ಅನಂತ್‌ಕುಮಾರ್ ಹೆಗಡೆ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಲೋಕೊಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.