ಹಳಿಯಾಳ: ಪಟ್ಟಣದ ಜಂಬ್ಯಾಳ ಗಲ್ಲಿಯ ಮಿಂಡೋಳಕರ ಕುಟುಂಬದ ಆದರ್ಶ ಮಿಂಡೋಳಕರ ನ್ಯಾಷನಲ್ ಏರ್ಗನ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾನೆ.
ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ಸೆ.19ರಿಂದ 24ರವರೆಗೆ ಪ್ರಿ- ನ್ಯಾಷನಲ್ ಏರ್ಗನ್ ಶೂಟಿಂಗ್ ಕಾಂಪಿಟೇಷನ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಗತ್ಸಿಂಗ್ ಶೂಟಿಂಗ್ ಅಕಾಡೆಮಿಯ 5 ಶೂಟರ್ಗಳು ಭಾಗವಹಿಸಿದ್ದರು. ಈ ಪೈಕಿ ಆದರ್ಶ ದೆಹಲಿಯಲ್ಲಿ ನವೆಂಬರ್ನಲ್ಲಿ ನಡೆಯಲಿರುವ ನ್ಯಾಷನಲ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾನೆ. ಛತ್ರಪತಿ ಶಿವಾಜಿ ಶಿಕ್ಷಣ ಸಂಸ್ಥೆಯ ಇಂಗ್ಲಿಷ್ ಮೀಡಿಯಂ ಸ್ಕೂಲ್ನ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆದರ್ಶ, ಪಟ್ಟಣದ ಲೀಲಾಧರ ಮತ್ತು ಜಯಶ್ರೀ ದಂಪತಿ ದ್ವಿತೀಯ ಪುತ್ರ.
ನ್ಯಾಷನಲ್ ಏರ್ಗನ್ ಚಾಂಪಿಯನ್ ಶಿಪ್ಗೆ ಆದರ್ಶ
