Slide
Slide
Slide
previous arrow
next arrow

ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 3,07,000ರೂ ಲಾಭ

300x250 AD

ಶಿರಸಿ: ತಾಲೂಕಿನ ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ 2021-2022ನೇ ಸಾಲಿನಲ್ಲಿ 3,07,000ರೂ ಲಾಭ ಗಳಿಸಿದೆ. ಇತ್ತೀಚೆಗೆ ನಡೆದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಂಘದ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ನಡಗೋಡ ಎಲ್ಲರನ್ನೂ ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ನಡಗೋಡ ಮಾತನಾಡಿ ಸಂಘಕ್ಕೆ ಗುಣಮಟ್ಟದ ಹಾಲನ್ನು ಪೂರೈಸಿದ ಎಲ್ಲಾ ಹಾಲು ಉತ್ಪಾದಕ ಸದಸ್ಯರನ್ನ ಅಭಿನಂದಿಸಿದರು.ಹಾಗೂ 2021-2022ನೆ ಸಾಲಿನಲ್ಲಿ ಹಾಲನ್ನು ಪೂರೈಸಿದ ಸದಸ್ಯರಿಗೆ 1ರೂಪಾಯಿ ಬೋನಸ್ ಕೊಡುವುದಾಗಿ ತಿಳಿಸಿದರು.ನಂತರ ಸಂಘದ ಸಂಸ್ಥಾಪಕರು ಸಹಕಾರಿ ರತ್ನ ಪುರಸ್ಕೃತ ಶಂಭುಲಿಂಗ ಹೆಗಡೆ ನಡಗೋಡ ಅವರನ್ನು ಹಾಗೂ ಸಂಘಕ್ಕೆ ನಿರಂತರವಾಗಿ ಹಾಲನ್ನು ಪೂರೈಸಿದ ಹಿರಿಯ ಸದಸ್ಯರಾದ ದಿವಾಕರ ದೇವರು ಭಟ್ಟ ಕಾಡ್ಕೊಳಿ,ಶಾಂತಾರಾಮ ಗೋ ಹೆಗಡೆ ಅಂಬಳಿಕೆಮನೆ ವೆಂಕಟ್ರಮಣ ಚಂ ಭಟ್ಟ ಕಡವೆ, ಶ್ರೀಪಾದ ಸು ಹೆಗಡೆ ಅಂದಳ್ಳಿ ಕೆಳಗಿನ ಮನೆ, ಶ್ರೀನಿವಾಸ ಗಣಪತಿ ಜೋಶಿ ಕೂಗಲಕುಳಿ , ಶ್ರೀಪಾದ ಬಂಗಾರ್ಯ ನಾಯ್ಕ ಗುಡ್ಡೆಕೊಪ್ಪ ಹಾಗು 33ವರ್ಷ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದ ನಾಗಾನಂದ ರಾ ಹೆಗಡೆ ತಾರಗೋಡ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರು ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ ಹಾಲು ಉತ್ಪಾದನೆ ಹೆಚ್ಚಿಸಲು ಒಕ್ಕೂಟದಿಂದ ಎಲ್ಲಾ ಸಹಕಾರ ನೀಡುತ್ತಿದ್ದು ಇನ್ನೂ ಹೆಚ್ಚಿನ ಹಾಲು ಉತ್ಪಾದಿಸಲು ತಿಳಿಸಿದರು.ಹಾಗು ಸಂಘದ ಕಾರ್ಯಚಟುವಟಿಕೆ ಮತ್ತು ಪ್ರಗತಿಯನ್ನು ಶ್ಲಾಘಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಭುಲಿಂಗ ಹೆಗಡೆ ಇವರು ಅವರ ಸಹಕಾರಿ ಜೀವನ ನಡೆದು ಬಂದ ದಾರಿಯಲ್ಲಿ ಸಹಕಾರ ನೀಡಿದವರನ್ನು ಹಾಗು ಹಾಲು ಉತ್ಪಾದಕರ ಸಂಘ ನಡೆದುಬಂದ ದಾರಿಯನ್ನು ನೆನಪಿಸಿ ಕೊಂಡರು.ನಾಗಾನಂದ ಹೆಗಡೆ ಇವರು ಮಾತನಾಡಿ ಸಂಘದಲ್ಲಿ ಅವರಿಗೆ ಸಹಕಾರ ನೀಡಿದ ಹಿಂದಿನ ಆಡಳಿತ ಕಮೀಟಿಯವರಿಗೂ ಈಗಿನ ಆಡಳಿತ ಕಮೀಟಿಯವರಿಗೂ ಅಭಿನಂದನೆ ಸಲ್ಲಿಸಿ ಪ್ರತಿ ರೈತರು ಮನೆಗೊಂದು ಆಕಳನ್ನು ಕಟ್ಟಿದರೆ ಪೌಷ್ಟಿಕ ಹಾಲನ್ನು ಪಡೆಯಬಹುದು ಸಂಘಕ್ಕೂ ಗುಣಮಟ್ಟದ ಹಾಲನ್ನು ಪೂರೈಸಬಹುದು ಎಂದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಶಿ ಹೆಗಡೆ ಕುಂಬ್ರಿಗದ್ದೆ, ಹುಳಗೋಳ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ಆರ್ ಎಸ್ ಭಟ್ಟ ನಡಗೋಡ ,ಎಚ್ ಆರ್ ಡಿ ಎ ತಾರಗೋಡ ಸಂಘದ ಅಧ್ಯಕ್ಷರಾದ ಡಿ ಎಸ್ ಹೆಗಡೆ ಶೆಡಿಕೊಡ್ಲು ಹಾಗು ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಎಲ್ಲ ನಿರ್ದೇಶಕರು ಹಾಜರಿದ್ದರು.ಕೊನೆಯಲ್ಲಿ ಸಂಘದ ನಿರ್ದೇಶಕರಾದ ಉದಯ ಹೆಗಡೆ ಅಂಬಳಿಕೆ ವಂದನಾರ್ಪಣೆ ನಡೆಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top