Slide
Slide
Slide
previous arrow
next arrow

ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸಾಧಾರಣ ಸಭೆ ಯಶಸ್ವಿ

300x250 AD

ಶಿರಸಿ:ತಾಲೂಕಿನ ಚಿಪಗಿಯ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯು ಇತ್ತೀಚೆಗೆ ಸಂಘದ ಕಾರ್ಯಾಲಯದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರೂಪಾ ಮಂಜುನಾಥ ಹೆಗಡೆ ವಹಿಸಿದ್ದರು. ಮುಖ್ಯಅಥಿತಿಯಾಗಿ ಗ್ರಾ,ಪಂ ಇಸಳೂರಿನ ಅಧ್ಯಕ್ಷೆ ಪೂರ್ಣಿಮಾ ನರೇಶ ಭಟ್ಟ ಆಗಮಿಸಿದ್ದರು. ಕೆ.ಎಮ್.ಎಫ್ ನಿವೃತ್ತ ಉಪ ವ್ಯವಸ್ಥಾಪಕ ವಿ.ಜಿ.ಭಟ್ಟ ಅಥಿತಿಯಾಗಿ ಆಗಮಿಸಿದ್ದರು. ಮುಖ್ಯ ಕಾರ್ಯನಿರ್ವಾಹಕರಾದ ಶುಭಾ ಹೆಗಡೆ ಚಿಪಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಶೇರು ಸದಸ್ಯರು ಉಪಸ್ಥಿತರಿದ್ದರು.
ಚಿಪಗಿ ಹಾಲು ಉತ್ಪಾದಕರ ಸಹಕಾರಿ ಸಂಘವು 2021-22ನೇ ಸಾಲಿನಲ್ಲಿ ಒಟ್ಟೂ 1,47,287 ಲೀಟರ್ ಹಾಲು ಸಂಗ್ರಹಿದ್ದು ಅದರ ಮೌಲ್ಯ 38,28,873 ರೂ ಗಳಾಗಿದೆ. 2021-22 ನೇ ಸಾಲಿನಲ್ಲಿ ಸಂಘವು ಸ್ಥಳೀಯ ಹಾಲು ಮಾರಾಟ ಮತ್ತು ಧಾರವಾಡ ಹಾಲು ಒಕ್ಕೂಟಕ್ಕೆ ಒಟ್ಟೂ 46,35,339 ರೂ ಹಾಲು ಮಾರಾಟ ಮಾಡಿರುತ್ತದೆ. ಸಂಘವು 21-22ನೇ ಸಾಲಿನಲ್ಲಿ 6,75,661 ರೂ ವ್ಯಾಪಾರಿ ಲಾಭಗಳಿಸಿದ್ದು ನಿವ್ವಳ ಲಾಭ 3,44,270.80 ರೂಗಳಾಗಿರುತ್ತದೆ. ಲಾಭಾಂಶದಲ್ಲಿ ಸಂಘದ ಶೇರು ಸಧಸ್ಯರಿಗೆ 20% ಶೇರು ಡಿವಿಡೆಂಟ್ ಘೋಶಿಸಿದ್ದು 2020-21ನೇ ಸಾಲಿನಲ್ಲಿ ಹಾಲು ಪೂರೈಸಿದ ಸಧಸ್ಯರಿಗೆ ಪ್ರತಿ ಲೀಟರ್ ಗೆ 1.08 ರೂ ನಂತೆ ಬೋನಸ್ ನೀಡಲು ನಿರ್ಧರಿಸಲಾಗಿದೆ.
ಮುಖ್ಯಅಥಿತಿಯಾಗಿ ಆಗಮಿಸಿದ್ದ ಪೂರ್ಣಿಮಾ ನರೇಶ ಭಟ್ಟರವರು ಮಾತನಾಡಿ ಸಂಘವು ಉತ್ತಮ ಪ್ರಗತಿಯಲ್ಲಿದ್ದು ಇದು ಇನ್ನೂ ಹೆಚ್ಚು ಪ್ರಗತಿ ಹೊಂದಲಿ.ತನ್ಮೂಲಕ ಚಿಪಗಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಅನಕೂಲವಾಗಲಿ ಎಂದು ಆಶಿಸಿದರು. ವಿ.ಜಿ.ಭಟ್ಟರವರು ಮಾತನಾಡಿ ನಿಮ್ಮಸಂಘವು ಇನ್ನೂಹೆಚ್ಚಿನ ಹಾಲನ್ನು ಸಂಗ್ರಹಿಸಲು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಆಕಳನ್ನು ಸಾಕಬೇಕು, ಪಶು ಸಂಗೋಪನೆಯಿಂದ ವಿಮುಖರಾಗಬಾರದು.ಒಂದು ವೇಳೆ ನಿಮಗೆ ಸಾಕಲು ಅನಾನುಕೂಲವಿದ್ದರೆ ಬೇರೆಯವರಿಗೆ ಸಾಕಲು ಪ್ರೋತ್ಸಾಹ ನೀಡಬೇಕು ಎಂದರು.

ಸಂಘದ ಅಧ್ಯಕ್ಷರಾದ ಶ್ರೀಮತಿ ರೂಪಾ ಮಂಜುನಾಥ ಹೆಗಡೆ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಕಳನ್ನು ಸಾಕುವ ವೆಚ್ಚ ಹೆಚ್ಚಾಗುತ್ತಿದೆ ಕಾರಣ ರೈತರಿಗೆ ಪ್ರತಿ ಲೀಟರಿಗೆ ಕೆ,ಎಮ್,ಎಫ್, ನೀಡುವ ದರಕ್ಕಿಂತ 50 ಪೈಸೆ ಹೆಚ್ಚುವರಿಯಾಗಿ ಸಂಘದಿಂದ ನೀಡಲಾಗುವದು ಅದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದರು.

300x250 AD
Share This
300x250 AD
300x250 AD
300x250 AD
Back to top