ಶಿರಸಿ: ಭೈರುಂಬೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ. ರಂದು ನಡೆಯಿತು. ಸಂಘದ ಮುಖ್ಯ ಕಾರ್ಯ ನಿರ್ವಾಹಕ ಮಂಜುನಾಥ ಎನ್. ಹೆಗಡೆ ಬುಗಡಿಮನೆ ಎಲ್ಲರನ್ನು ಸ್ವಾಗತಿಸಿ ವಾರ್ಷಿಕ ವರದಿಯನ್ನು ಮಂಡಿಸಿದರು. ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ ಸಂಘದ ಮುಂದಿನ ಯೋಜನೆಗಳ ಬಗ್ಗೆ ಸಂಘದ ಗುರಿಯ ಕುರಿತು ಪರಾಮರ್ಶಿಸಿ ಉತ್ಪಾದಕರಿಗೆ ಹೆಚ್ಚು ಹಾಲು ಉತ್ಪಾದನೆ ಮಾಡಲು ವಿನಂತಿಸಿದರು. ನಂತರ ಸಂಘದಲ್ಲಿ ನಿರಂತರ ಗುಣಮಟ್ಟದ ಹಾಲು ಹಾಕಿದ ಸದಸ್ಯ ರಾಮಚಂದ್ರ ಶಿವರಾಮ ಹೆಗಡೆ ಗುಂಡಿಗದ್ದೆ ದಂಪತಿಗಳನ್ನು ಉಪಸ್ಥಿತರಿದ್ದ ಗಣ್ಯರಿಂದ ಸನ್ಮಾನಿಸಲಾಯಿತು. ಹಾಗೂ ಸಭೆಗೆ ಆಗಮಿಸಿದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವಿ. ಮುಗದ ಅವರನ್ನು ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ತುಂಬಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಶಂಕರ ವಿ. ಮುಗದ ಹೈನುಗಾರರ ಸಂಕಷ್ಟದ ಅರಿವಿದ್ದು ಒಕ್ಕೂಟದಿಂದ 1 ರೂ. ಕೂಡಲೇ ಹಾಲಿನ ದರ ಹೆಚ್ಚಿಸುವುದಾಗಿ ಭರವಸೆ ನೀಡಿದರು ಹಾಗೂ ಸರ್ಕಾರದಿಂದ 3 ರೂ. ಹಾಲಿನ ದರ ಹೆಚ್ಚಿಸುವ ಭರವಸೆ ನೀಡಿದ್ದು ಅದನ್ನು ಸಹ ನೇರವಾಗಿ ರೈತರಿಗೆ ವರ್ಗಾಯಿಸುವ ಬಗ್ಗೆ ತಿಳಿಸಿದರು. ಹನುಮಂತಿ ಹಾಲಿನ ಘಟಕಕ್ಕೆ ಹಾಲಿನ ಬೇಡಿಕೆ ಇದ್ದು ರೈತರು ಹಾಲಿನ ಉತ್ಪಾದನೆ ಹೆಚ್ಚಿಸಲು ಕರೆ ನೀಡಿ ಸಂಘದ ಕಾರ್ಯವನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಹುಳಗೋಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್.ಹೆಗಡೆ ಕೆಶಿನ್ಮನೆ ಮಾತನಾಡಿ ಕೃಷಿಗೆ ಪೂರಕವಾದ ಹೈನುಗಾರಿಕೆ ಬಿಡದೇ ಮುಂದುವರಿಸಿಕೊಂಡು ಹಾಲಿನ ಉತ್ಪಾದನೆ ಹೆಚ್ಚಿಸುವ ಬಗ್ಗೆ ಕರೆನೀಡಿದರು. ವೇದಿಕೆಯಲ್ಲಿ ಹುಳಗೋಳ ಸೇವಾ ಸಹಕಾರ ಸಂಘದ ಉಪಾಧ್ಯಕ್ಷ ರಘುಪತಿ ಭಟ್ ನಿಡಗೋಡ, ಒಕ್ಕೂಟದ ಉಪವ್ಯವಸ್ಥಾಪಕ ಎಸ್.ಎಸ್. ಬಿಜ್ಜೂರ ಹಾಗೂ ಸಂಘದ ಉಪಾಧ್ಯಕ್ಷ ರವಿ ಗ. ಹೆಗಡೆ ಹುಳಗೋಳ ಹಾಗೂ ನಿರ್ದೇಶಕ ಜಿ. ಎನ್. ಹೆಗಡೆ ಕಣ್ಣೀಮನೆ ಉಪಸ್ಥಿತರಿದ್ದರು. ಅನಂತ ಭಟ್ ಹುಳುಗೋಳ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಉಪಾಧ್ಯಕ್ಷರಾದ ರವಿ ಹೆಗಡೆ ಹುಳಗೋಳ ಅಭಿನಂದಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.