• Slide
    Slide
    Slide
    previous arrow
    next arrow
  • ನವೋದಯ ವಿದ್ಯಾರ್ಥಿಗಳಿಂದ ಪೋಷಣ ಅಭಿಯಾನ  ಬೀದಿನಾಟಕ ಪ್ರದರ್ಶನ

    300x250 AD

    ಶಿರಸಿ : ವಿಟಮಿನ್‍ಯುಕ್ತ ಆಹಾರ ಪದಾರ್ಥಗಳನ್ನು ಮನೆಯಲ್ಲಿ ತಯಾರಿಸಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು. ಅಪೌಷ್ಠಿಕ ಆಹಾರಗಳ ಕುರಿತು ಮಕ್ಕಳು, ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕ ಆರೋಗ್ಯ ಅಧಿಕಾರಿ ಡಾ. ವಿನಾಯಕ್ ಭಟ್  ಹೇಳಿದರು.

    ಪ್ರಧಾನಮಂತ್ರಿ ರಾಷ್ಟ್ರೀಯ ಪೋಷಣ ಅಭಿಯಾನದ ಅಂಗವಾಗಿ  ಪೋಷಣ ಬಿ ಶಿಕ್ಷಣ ಬಿ ಬೀದಿ ನಾಟಕವನ್ನು ಮಳಗಿಯ ಜವಾಹರ ನವೋದಯ ಶಾಲೆಯ ವಿದ್ಯಾರ್ಥಿಗಳು ಪೋಷಣ ಅಭಿಯಾನ  ಬೀದಿ ನಾಟಕ ಪ್ರದರ್ಶನವನ್ನು ನಗರದ ಹೊಸ ಬಸ್ ನಿಲ್ದಾಣ, ಹಳೆ ಬಸ್ ನಿಲ್ದಾಣ ಹಾಗೂ ಮಾರಿಕಾಂಬಾ ದೇವಸ್ಥಾನದ ಹತ್ತಿರ ನಾಟಕ ಪ್ರದರ್ಶನವನ್ನು ನಡೆಸಿಕೊಟ್ಟರು.

    ಪೋಷಣ ಅಭಿಯಾನ ಬೀದಿ ನಾಟಕ ಪ್ರದರ್ಶನದ ಉದ್ಘಾಟನೆಯನ್ನು ಶಿರಸಿ ನಗರ ಬಸ್ ನಿಲ್ದಾಣದಲ್ಲಿ ಮಾಡಿ ಮಕ್ಕಳ ಬೀದಿ ನಾಟಕ ಒಳ್ಳೆಯ ಸಂದೇಶವನ್ನು ಸಾರುವಂತದ್ದು. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಬಸ್ ನಿಲ್ದಾಣದಲ್ಲಿ ಸೇರಿದ ಎಲ್ಲರಿಗೂ ಶುಭ ಕೋರಿದರು

     ನಂತರ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರದ ಧಾರವಾಡ ಜಿಲ್ಲಾಧ್ಯಕ್ಷ ಯಮನಪ್ಪ ಜಾಲಗರ ಮಾತನಾಡಿ ಉತ್ತಮ ಶಿಕ್ಷಣ ನಮ್ಮ ಜೀವನಕ್ಕೆ ,ಪೌಷ್ಠಿಕ ಆಹಾರ ನಮ್ಮ ಆರೋಗ್ಯಕ್ಕೆ ,ಮತ್ತು ಸರ್ಕಾರದ ಸವಲತ್ತುಗಳು ಉತ್ತಮ ಸಮಾಜ ನಿರ್ಮಾಣಕ್ಕೆ  ಇಂಥ ಸಂದೇಶ ಸಾರುವ ಈ ಬೀದಿ ನಾಟಕ ಪ್ರದರ್ಶನ ಮಾಡಲು ಮಳಗಿಯ ನವೋದಯ ವಿದ್ಯಾಲಯದ  ಸಂಸ್ಥೆಯ ಪ್ರಾಚಾರ್ಯರಿಗೆ ಹಾಗೂ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.

    300x250 AD

    ಮಕ್ಕಳು ಯಾವತ್ತೂ ಪಾನಿಪುರಿ, ಬರ್ಗರ್, ರಸ್ತೆ ಬದಿಯ ತಿನಿಸುಗಳಿಗೆ ಮಾರುಹೋಗದೆ ಶುದ್ಧವಾದ ಸಸ್ಯಹಾರಿಗಳಾದ ಸೊಪ್ಪು , ತರಕಾರಿಗಳಂತ ಆಹಾರವನ್ನು ಸೇವಿಸಿ ಉತ್ತಮ ಆರೋಗ್ಯ ಹೊಂದಬೇಕು ಎಂದು ಹೇಳಿದರು.

    ಪೌಷ್ಠಿಕ ಅಹಾರ ಮಹಿಳಾ ಸಬಲೀಕರಣ ಮತ್ತು ಮಕ್ಕಳ ವಿದ್ಯಾಭ್ಯಾಸ ಬಹಳ ಮುಖ್ಯ ಅಂತ ಸಂದೇಶ ಸಾರುವ ನಿಟ್ಟಿನಲ್ಲಿ ನವೋದಯ ಮಕ್ಕಳ ಈ ಬೀದಿ ನಾಟಕ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ.  ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಯುವಕರ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ  ನಾವೆಲ್ಲರೂ ಬಹಳ ಜಾಗರೂಕತೆಯಿಂದ ಮಕ್ಕಳನ್ನು ಬೆಳೆಸುವ, ತಿದ್ದುವ ಕೆಲಸ ಮಾಡಬೇಕೆಂದು ಹಾಗೂ  ಅವರ ಭವಿಷ್ಯ ರೂಪಿಸುವಲ್ಲಿ ನಮ್ಮೆಲ್ಲರ ಪಾತ್ರ ದೊಡ್ಡದು ಎಂದು ಶಾಲೆಯ ಶಿಕ್ಷಕರಾದ ಮಾಲತೇಶ್ ಕಡತಿ   ಅಭಿಪ್ರಾಯ ವ್ಯಕ್ತಪಡಿಸಿದರು. ಅಶ್ವಿನಿ ತಳವಾರ್ ಫಕೀರಪ್ಪ ಎಸ್, ಎಂ  ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top