Slide
Slide
Slide
previous arrow
next arrow

ಜನತೆಯ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ: ವಿ.ಎನ್.ನಾಯ್ಕ

300x250 AD

ಸಿದ್ದಾಪುರ; ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು, ಸಮಸ್ಯೆಯ ಆಗರವಾಗಿದೆ. ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಮಾಡಿರುವ ಯೋಜನೆಯಲ್ಲಿ ಸ್ವ-ಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳ ಮೂಲಕ ಮಾಡಿರುವ ವ್ಯವಹಾರದಲ್ಲಿ ನ್ಯಾಯವಾಗಿದೆ.ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ನ್ಯಾಯವನ್ನು ಒದಗಿಸುವ ಪ್ರಯತ್ನ ಮಾಡಿಲ್ಲ.ಈ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡರಾದ ವಿ.ಎನ್.ನಾಯ್ಕ ಬೇಡ್ಕಣಿ ಹೇಳೀದರು.
ಈ ಕುರಿತು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ವ-ಸಹಾಯ ಸಂಗದಲ್ಲಿ ಆಗಿರುವ ಅವ್ಯವಹಾರಗಳ ಸಮಗ್ರ ತನಿಖೆಯನ್ನು ನಡೆಸುವಂತೆ ಕ್ರಮಕೈಗೊಳ್ಳಲು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಹಾಗೂ ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ಅವರಲ್ಲಿ ಮನವಿ ಮಾಡಿಕೊಂಡಿದ್ದೇವೆ.ಈ ಬಗ್ಗೆ ಮಹಿಳೆಯರಿಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನದಲ್ಲಿ ನಮ್ಮ ಪಕ್ಷದ ಮಹಿಳೆಯರ ಜೊತೆಗೂಡಿ ದೊಡ್ಡ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಹಿಂದೆ ಸರ್ಕಾರಗಳು ಯಾವುದೆ ಇದ್ದರು ಸರ್ಕಾರದ ಯೋಜನೆಯನ್ನು ಜನತೆಗೆ ತಿಳಿಸಲು ಗ್ರಾಮೀಣ ಕಲಾವಿದರ ಮೂಲಕ ಆ ಕೆಲಸ ಮಾಡುತ್ತಿತ್ತು. ಆದರೆ ಈಗ ರೂ ನಾಲ್ಕು ಕೋಟಿ ಅನುದಾನ ಇಟ್ಟು ಸರಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಚಾರ ನೀಡಲು ಅವಕಾಶ ನೀಡದೆ ವಂಚನೆ ಮಾಡಿದೆ. ಅವರಿಗೂ ಪುನಃ ಸರ್ಕಾರ ಅವಕಾಶವನ್ನು ನೀಡಬೇಕು ಎಂದು ಆಗ್ರಹಿಸುತ್ತೇವೆ.
ತಾಲೂಕಿನಲ್ಲಿ ರೈತರ ಸಮಸ್ಯೆ ಹೆಚ್ಚಾಗಿದೆ. ಪಹಣಿಯಲ್ಲಿ ಸರಿಯಾಗಿ ಬೆಳೆಯ ದಾಖಲೆ ಸರಿಯಾಗಿ ಆಗುತ್ತಿಲ್ಲ. ಇದರಿಂದ ಬೆಳೆಸಾಲ, ಕೃಷಿ ಸಾಲ ಪಡೆಯುವುದಕ್ಕೆ, ಬೆಳೆ ವಿಮೆ ಮಾಡುವಲ್ಲಿ ತೊಂದರೆ ಆಗುತ್ತಿದೆ.ಇದನ್ನು ತಕ್ಷಣ ಸರಿಪಡಿಸುವ ಕೆಲಸವನ್ನು ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾಡಬೇಕು. ಇನ್ನು ಅತಿಯಾದ ಮಳೆಯಿಂದ ಬೆಳೆಯ ಹಾನಿಯಾಗಿದೆ. ಇದರಿಂದ ಸಾಮೂಹಿಕವಾಗಿ ಬೆಳೆಹಾನಿ ಪರಿಹಾರವನ್ನು ನೀಡುವಂತಾಗಬೇಕು. ಅನೇಕ ರೈತರು ಸಾಗುವಳಿ ಮಾಡಿಕೊಂಡಿದ್ದರು ಪಹಣಿಯಲ್ಲಿ ಕರ್ನಾಟಕ ಸರ್ಕಾರ ಎಂದಿದೆ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕು.
ತಾಲೂಕಿನ ಬಹುತೇಕವಾದ ಎಲ್ಲಾ ರಸ್ತೆಗಳು ಹೊಂಡಮಯವಾಗಿದೆ. ಅನೇಕ ಊರುಗಳಲ್ಲಿ ರಸ್ತೆ ಓಡಾಟವನ್ನು ಮಾಡುವುದಕ್ಕೆ ಸಾಧ್ಯವಾಗದ ಸ್ಥಿತಿಯಲ್ಲಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಇದನ್ನು ಯೋಜನೆ ತಯಾರಿಸಿ ಕೆಲಸ ಮಾಡುವುದಕ್ಕೆ ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲ. ತಾಲೂಕಿನಲ್ಲಿ ಖಾಲಿ ಇರುವ ಸಿಬ್ಬಂದಿಗಳನ್ನು ಬರ್ತಿಮಾಡಬೇಕು. ನಾವು ಹೇಳಿರುವ ಕೆಲಸ ಕಾರ್ಯವನ್ನು ಮುಂದಿನ 15 ದಿನಗಳ ಒಳಗೆ ಮಾಡದಿದ್ದಲ್ಲಿ ಪಕ್ಷದಿಂದ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತ ನಿಕಟಪೂರ್ವ ಸದಸ್ಯರಾದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾಸೀರ್ ವಲ್ಲಿ ಖಾನ್, ಡಿ.ಸಿ.ಸಿ ಕಾರ್ಯದರ್ಶಿ ಸಾವೇರ್ ಡಿ’ಸೀಲ್ವಾ, ಸೇವಾದಳದ ತಾಲೂಕ ಅಧ್ಯಕ್ಷ ಗಾಂಧಿಜಿ ಆರ್.ನಾಯ್ಕ, ಮನ್ಮನೆ ಗ್ರಾಮ ಪಂಚಾಯತ ಉಪಾಧ್ಯಕ್ಷ ನಾಗರಾಜ ಕುಂಬ್ಳೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಮ್. ಟಿ. ಗೌಡ ಕಿಲವಳ್ಳಿ,ಕಾಂಗ್ರೆಸ್ ಹಿಂದುಳಿದ ವರ್ಗದ ತಾಲೂಕ ಅಧ್ಯಕ್ಷ ಗಂಗಾಧರ ಮಡಿವಾಳ ಕಡಕೇರಿ, ತಾಲೂಕಾ ಇಂಟೆಕ್ ಅಧ್ಯಕ್ಷರಾದ ರಾಮಕೃಷ್ಣ ನಾಯ್ಕ ಶಿರೂರು, ತಾಲೂಕಾ ಕಾಂಗ್ರೆಸ್ ಸದಸ್ಯರಾದ ಲಂಭೋದರ ಹೆಗಡೆ ಹಾಗೂ ಮಂಜುನಾಥ ನಾಯ್ಕ ಬೇಗಾರ್, ಕೃಷ್ಣ ಜಿಡ್ಡಿ ಮೊದಲಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top