Slide
Slide
Slide
previous arrow
next arrow

ಸ್ವಚ್ಛತಾ ಕೆಲಸಗಾರರು ಪೌರ ಕಾರ್ಮಿಕರಲ್ಲ, ನಗರದ ಆರೋಗ್ಯ ರಕ್ಷಕರು: ADC ರಾಜು ಮೊಗವೀರ

300x250 AD

ಕಾರವಾರ: ಪೌರ ಕಾರ್ಮಿಕ ಎಂದು ಕರೆಯುವುದಕ್ಕಿಂತ ಸ್ವಚ್ಚತೆ ಮೂಲಕ ಜನರ ಆರೋಗ್ಯವನ್ನ ಕಾಪಾಡುವುದರಿಂದ ನಗರದ ಆರೋಗ್ಯ ರಕ್ಷಕ ಎಂದು ಕರೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ನಗರಸಭೆ ವತಿಯಿಂದ ಆಯೋಜನೆ ಮಾಡಿದ್ದ 12ನೇ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು ಪೌರ ಕಾರ್ಮಿಕರು ಕೆಲಸ ಮಾಡುವುದನ್ನ ಜನ ಸಾಮಾನ್ಯರು ಗುರುತಿಸುವುದಿಲ್ಲ. ಅದೇ ಒಂದು ದಿನ ಅವರು ಕೆಲಸ ನಿಲ್ಲಿಸಿದರೆ ಎಲ್ಲರಿಗೂ ಸಮಸ್ಯೆ ಆಗುವ ಮೂಲಕ ಅವರ ಕಾರ್ಯ ಏನೆಂದು ತಿಳಿಯುತ್ತದೆ ಎಂದರು.
ಕಾರವಾರದಂತಹ ನಗರ ಸಣ್ಣ ನಗರವಾದರು ಸ್ವಚ್ಚ ನಗರವಾಗಿದ್ದು, ಇದಕ್ಕೆ ಪ್ರಮುಖ ಕಾರಣ ನಗರಸಭೆ ಹಾಗೂ ಪೌರ ಕಾರ್ಮಿಕರು. ನಗರ ಸ್ವಚ್ಚ ಮಾಡಿದರೆ ಸಾಲದು ಜನರು, ಕಸವನ್ನ ಹೆಚ್ಚಾಗಿ ಮಾಡುವುದನ್ನ ನಿಲ್ಲಿಸಬೇಕು. ಪೌರ ಕಾರ್ಮಿಕರು ಸ್ವಚ್ಚತೆ ಕಾರ್ಯದ ಜೊತೆಗೆ ತಮ್ಮ ಆರೋಗ್ಯದ ಮೇಲೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಪೌರ ಕಾರ್ಮಿಕರು ಹೃದಯವಂತರು. ಸ್ವಚ್ಚತೆ ಸಂಬಂಧ ಯಾವುದೇ ಕೆಲಸ ಹೇಳಿದರು ಮಾಡುತ್ತಾರೆ. ಅವರಿಗೆ ಇನ್ನೂ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ಸಿಗಬೇಕು. ನಗರಸಭೆಯಿಂದ ಯಾವ ಸೌಲಭ್ಯಗಳು ಸಿಗುತ್ತದೆಯೋ ಅದನ್ನೆಲ್ಲಾ ಪ್ರಾಮಾಣಿಕವಾಗಿ ಕೊಡುತ್ತೇವೆ. ಎಲ್ಲಾ ಪೌರ ಕಾರ್ಮಿಕರನ್ನ ಖಾಯಂ ಮಾಡಬೇಕು ಎನ್ನುವುದು ನಮ್ಮ ಆಗ್ರಹವಾಗಿದ್ದು ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಇದಕ್ಕೆ ಧ್ವನಿಯಾಗಿದ್ದಾರೆ ಎಂದರು.
ನಗರಸಭೆ ಪೌರಾಯುಕ್ತ ಆರ್.ಪಿ.ನಾಯ್ಕ, ಪೌರ ಕಾರ್ಮಿಕರು ನಗರ ರಕ್ಷಕರು. ಕಾರವಾರ ಸ್ವಚ್ಚತೆಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಅಧಿಕಾರಿಗಳಾದ ನಾವು ನಗರಸಭೆಯನ್ನ ಮಾನಿಟರ್ ಮಾಡುತ್ತೇವೆ. ಆದರೆ ಪೌರ ಕಾರ್ಮಿಕರು ಕಷ್ಟಪಟ್ಟು ಕೆಲಸ ಮಾಡುವುದರಿಂದ ಕಾರವಾರ ಸ್ವಚ್ಚ ಹಾಗೂ ಸುಂದರ ನಗರವಾಗಿ ರಾಜ್ಯ ರಾಷ್ಟ್ರದಲ್ಲಿ ಗುರುತಿಸಿಕೊಂಡಿದೆ ಎಂದರು.
ನಗರಸಭೆ ಸದಸ್ಯೆ ರೇಷ್ಮಾ ಮಾಳ್ಸೇಕರ ಮಾತನಾಡಿ, ವರ್ಷವಿಡಿ ಪೌರ ಕಾರ್ಮಿಕರು ಜನರಿಗಾಗಿ ಮೀಸಲಿಡುತ್ತಾರೆ. ಪೌರ ಕಾರ್ಮಿಕರ ದಿನದ ಮಹತ್ವ ಎಲ್ಲಿರಿಗೂ ತಿಳಿಯಲು ಅವರ ದಿನಾಚರಣೆ ಮಾಡಲಾಗುವುದು. ಇಂದು ಕಾರವಾರ ಸುಂದರವಾಗಿ ಮಾರ್ಪಾಡಾಗಿದ್ದು ನಮ್ಮ ಕಾರವಾರ ಎಂದು ಎಲ್ಲರೂ ಹೆಗ್ಗಳಿಕೆಯಿಂದ ಹೇಳಿಕೊಳ್ಳುತ್ತಾರೆ. ಅದಕ್ಕೆ ಪ್ರಮುಖ ಕಾರಣ ಪೌರ ಕಾರ್ಮಿಕರು. ಪೌರ ಕಾರ್ಮಿಕರ ಕೆಲಸ ಬಗ್ಗೆ ಮಕ್ಕಳಿಗೆ ತಿಳಿಸಲು ಪಠ್ಯದಲ್ಲಿ ಅವರ ಪಾಠವನ್ನ ಸೇರಿಸಬೇಕು ಎಂದರು.
ನಗರಸಭೆ ಉಪಾಧ್ಯಕ್ಷ ಪ್ರಕಾಶ್ ನಾಯ್ಕ, ಸದಸ್ಯರಾದ ಮಾಳ ಹುಲುಸ್ವಾರ್, ನಯನಾ ನೀಲಾವರ, ಹನುಮಂತಪ್ಪ ತಳವಾರ್, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ನಾರಾಯಣ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪೌರ ಕಾರ್ಮಿಕರನ್ನ ನಗರಸಭೆ ವತಿಯಿಂದ ಸನ್ಮಾನಿಸಲಾಯಿತು. ಪೌರ ಕಾರ್ಮಿಕ ದಿನಾಚರಣೆ ಹಿನ್ನಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top